ಕರಾವಳಿರಾಜಕೀಯ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಬಹುನಿರೀಕ್ಷಿತ  ಕಚೇರಿ ನಾಳೆ (ಆ.28) ಉದ್ಘಾಟನೆ



ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರ ಬಹುನಿರೀಕ್ಷಿತ ಕಚೇರಿ ಆ.28ರಂದು ಉದ್ಘಾಟನೆಗೊಳ್ಳಲಿದೆ. ಶಾಸಕರಾಗಿ ನೂರು ದಿನದ ಬಳಿಕ ಶಾಸಕರ ಅಧಿಕೃತ ಕಚೇರಿ ಮಿನಿ ವಿಧಾನಸೌಧದ ಬಳಿ ಇರುವ ಹಳೆಯ ಪುರಸಭಾ ಕಚೇರಿ (ಪುಡಾಕಚೇರಿ)ಯಲ್ಲಿ ಉದ್ಘಾಟನೆಗೊಳ್ಳಲಿದ್ದು ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. 

ವಿಶಾಲ ಸ್ಥಳಾವಕಾಶವನ್ನು ಹೊಂದಿರುವ ಕಚೇರಿಯಲ್ಲಿ ಶಾಸಕರನ್ನು ಭೇಟಿಯಾಗಲು ಬರುವವರಿಗೆ, ಅಥವಾ ಕಚೇರಿಗೆ  ಬರುವ ಸಾರ್ವಜನಿಕರಿಗೆ ಎಲ್ಲಾ ಸೌಕರ್ಯಗಳನ್ನೊಳನ್ನು ಈ ಕಚೇರಿ ಹೊಂದಿದೆ. ಪಾರ್ಕಿಂಗ್ ವ್ಯವಸ್ಥೆಯೂ ಸಾಕಷ್ಟಿದೆ. ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಕಚೇರಿ ಉದ್ಘಾಟನೆ ಬಳಿಕ ಸುಮಾರು 160 ಕುಟುಂಬಗಳಿಗೆ ಶಾಸಕರು ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಾರ್ವಜನಿಕರಿಗೆ ತ್ವರಿತಗತಿಯ ಸೇವೆ ನೀಡುವುದು ಈ ಕಚೇರಿಯ ಉದ್ದೇಶವಾಗಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರು ಈ ಕಚೇರಿಗೆ ಬಂದರೆ ಶಾಸಕರನ್ನು ಭೇಟಿಯಾಗಬಹುದು. ಕಚೇರಿಯಲ್ಲಿ ಸಾರ್ವಜನಿಕರಿಂದ ಎಲ್ಲಾ ರೀತಿಯ ಅರ್ಜಿಗಳನ್ನು ಸ್ವೀಕರಿಸಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಯಾವುದೇ ಇಲಾಖೆಗಳಿಗೆ ಅರ್ಜಿ ಸಲ್ಲಿಸಲು ಅಥವಾ ಯಾವುದೆ ಇಲಾಖೆಯಲ್ಲಿ ಕೆಲಸ ಕಾರ್ಯಗಳು ನಡೆಯದೆ ಇದ್ದಲ್ಲಿ ಶಾಸಕರ ಕಚೇರಿಯಲ್ಲಿರುವ ಆಯಾ ಇಲಾಖೆಗೆ ಸಂಬಂಧಿಸಿದ ಸಿಬಂದಿಗಳನ್ನು ಭೇಟಿಯಾಗಿ ಮಾತನಾಡಬಹುದಾಗಿದೆ. ಕೆಲವೊಂದು ಸಮಸ್ಯೆಗಳಿಗೆ ಕಚೇರಿಯ ಸಿಬಂದಿಗಳೇ ಪರಿಹಾರ ಸೂಚಿಸುವ ಕೆಲಸವನ್ನು ಮಾಡಲಿದ್ದಾರೆ.

ನನ್ನ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಿನಿ ವಿಧಾನಸೌಧದ ಬಳಿಯೇ ಹೊಸ ಕಚೇರಿಯನ್ನು ತೆರೆದಿದ್ದು ಸಾರ್ವಜನಿಕರ ಸೇವೆಗೆ ಸಿಬಂದಿಗಳನ್ನು ನೇಮಕ ಮಾಡಿದ್ದೇನೆ. ಯಾವುದೇ ಸಮಸ್ಯೆಗಳಿದ್ದರೂ, ತೊಂದರೆಗೊಳಗಾದವರು ಶಾಸಕರ ಕಚೇರಿಗೆ ಬಂದು ತಿಳಿಸಬಹುದು. ದೂರು, ಮನವಿ ಇದ್ದರೂ ಕೊಡಬಹುದು. ಕ್ಷೇತ್ರದ ಎಲ್ಲರಿಗೂ ನನ್ನ ಕಚೇರಿಗೆ ಮುಕ್ತವಾಗಿ ಬರಲು ಅವಕಾಶ ಇದೆ ಎಂದು ಶಾಸಕ ಅಶೋಕ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!