ನಿಮ್ಮ ಮನೆಗೆ ಓಟು ಕೇಳಲು ಬರುತ್ತಾರ..? ಕೊಲೆಯಾದ ಗೌರಿ ಮನೆ ಪರಿಸ್ಥಿತಿ ಕಂಡು ಮರುಗಿದ ಶಾಸಕ ಅಶೋಕ್ ರೈ
ಪುತ್ತೂರು:ದುಷ್ಕರ್ಮಿಯಿಂದ ಕೊಲೆಯಾದ ಅಳಿಕೆ ಕುದ್ದುಪದವು ನಿವಾಸಿ ಗೌರಿ ಮನೆಗೆ ಆ.26ರಂದು ಶಾಸಕರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅತ್ಯಂತ ಕಡುಬಡತನದಲ್ಲಿ ಕಾಲ ಕಳೆಯುತ್ತಿರುವ ಮೃತ ಗೌರಿ ತಾಯಿಯ ಕಷ್ಟ ಕಂಡು ಶಾಸಕರು ಮರುಗಿದರು.

ಗೌರಿ ತಾಯಿಯ ಜೊತೆ ಮಾತನಾಡುವ ವೇಳೆ ಶಾಸಕರಲ್ಲಿ ತನ್ನ ಕುಟುಂಬದ ಸಂಕಷ್ಟವನ್ನು ವಿವರಿಸುವ ವೇಳೆ ನನ್ನ ಸಹೋದರಿ ಅಂಗವಿಕಲೆ ಆಕೆಗೆ ಯಾವುದೇ ಪಿಂಚಣಿ ನೀಡುತ್ತಿಲ್ಲ, ಆಧಾರ್ ಕಾರ್ಡು ಇಲ್ಲ ಎಂದು ಅಧಿಕಾರಿಗಳು ಆಕೆಗೆ ಯಾವುದೇ ಸವಲತ್ತನ್ನು ನೀಡಿಲ್ಲ ಎಂದು ಶಾಸಕರಲ್ಲಿ ಹೇಳಿದರು. ತಕ್ಷಣವೇ ವಿಕಲಚೇತನ ಯುವತಿ ಮಲಗಿದ್ದ ಸ್ಥಳಕ್ಕೆ ತೆರಳಿದ ಶಾಸಕರು ಒಮ್ಮೆಲೆ ಅಚ್ಚರಿಗೊಂಡದ್ದು ಮಾತ್ರವಲ್ಲದೆ ಪಿಂಚನಿ ಕೊಡದೇ ಇರುವ ವಿಚಾರ ಕೇಳಿ ಆಕ್ರೋಶಗೊಂಡರು.
ಛೇ.. ಎಂಥಾ ಅವಸ್ಥೆ…. ವಿಕಲ ಚೇತನಳಾದರೂ ಪಿಂಛಣಿ ಕೊಡ್ಲಿಕ್ಕೆ ಆಗ್ಲಿಲ್ವ ಇಲ್ಲಿನ ವ್ಯವಸ್ಥೆಗೆ? ಎಷ್ಟು ವರ್ಷದಿಂದ ಯುವತಿ ಮಲಗಿದ್ದಲ್ಲೇ ಇದ್ದಾರೆ? ನಿಮ್ಮ ಮನೆಗೆ ಓಟು ಕೇಳಲು ರಾಜಕೀಯದವರು ಬರುವುದಿಲ್ಲವೇ ತಾಯಿ ಎಂದು ಗೌರಿ ತಾಯಿಯನ್ನು ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಗೌರಿ ಆಯಿ ನನ್ನ ಸಹೋದರಿ ಶಾರದಾ ಅನೇಕ ವರ್ಷಗಳಿಂದ ಮಲಗಿದ್ದಲ್ಲೇ ಇದ್ದಾಳೆ, ನಾನು ಕೂಲಿ ಕೆಲಸಕ್ಕೆ ತೆರಳಿ ಮಕ್ಕಳನ್ನು ಸಾಕುತ್ತಿದ್ದೇನೆ, ವಿಕಲ ಚೇತನ ನನ್ನ ಸಹೋದರಿಗೆ ಆಧಾರ್ ಕಾರ್ಡು ಇಲ್ಲದ ಕಾರಣ ಸರಕಾರದಿಂದ ಏನೂ ಸಿಗುತ್ತಿಲ್ಲ ಎಂದು ಹೇಳಿದರು.
ನಾಳೆ ನಿಮ್ಮ ಮನೆಗೆ ನನ್ನ ಕಚೇರಿಯಿಂದ ಜನ ಬರುತ್ತಾರೆ ಅವರು ನಿಮ್ಮ ಸಹೋದರಿಗೆ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿ ಮುಂದಿನ ತಿಂಗಳು ಅವರಿಗೆ ವಿಕಲಚೇತನ ಪಿಂಚಣಿ ಬರುತ್ತದೆ ಏನೂ ಹೆದರಬೇಡಿ, ನಿಮ್ಮ ಜೊತೆ ನಾನಿದ್ದೇನೆ, ನಿಮ್ಮ ಕಷ್ಟದ ಜೊತೆ ನಾನಿದ್ದೇನೆ, ಧೈರ್ಯವಾಗಿ ಇರಿ ಎಂದು ಗೌರಿ ತಾಯಿಗೆ ಸಾಂತ್ವನ ಹೇಳಿದರು. ಗೌರಿ ಕುಟುಂಬದ ಬಡತನವನ್ನು ಕಂಡು ಶಾಸಕರ ಕಣ್ಣುಗಳು ತೇವಗೊಂಡಿದ್ದವು.