ಕರಾವಳಿಕ್ರೈಂ

ತೆಕ್ಕಾರು: ಮನೆಗೆ ಅಕ್ರಮ ಪ್ರವೇಶ ಮಾಡಿ ಅನುಚಿತ ವರ್ತನೆ, ಹಲ್ಲೆ ಆರೋಪ- ಮಹಿಳೆಯಿಂದ ಪೊಲೀಸ್ ದೂರು



ಬೆಳ್ತಂಗಡಿ: ಮಹಿಳೆಯೋರ್ವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದಲ್ಲಿ ವರದಿಯಾಗಿದೆ.

ತೆಕ್ಕಾರು ನಿವಾಸಿ ಮೈಮುನ ಎಂಬವರ ದೂರಿನಂತೆ ಆ.24ರಂದು ಸಂಜೆ ಮನೆಗೆ ಆರೋಪಿ ಮಹಮ್ಮದ್ ಕುಟೇಲು ಎಂಬಾತನು 5 ರಿಂದ 6 ಜನರನ್ನು ಸೇರಿಸಿಕೊಂಡು ಮಾರಕ ಆಯುಧಗಳೊಂದಿಗೆ ಅಕ್ರಮವಾಗಿ ಪ್ರವೇಶಿಸಿ ಮೈಮುನರೊಂದಿಗೆ ಅನುಚಿತವಾಗಿ ವರ್ತಿಸಿರುವುದಲ್ಲದೇ, ಅವರ ಅಸ್ವಸ್ಥ ಮಗ ತಡೆಯಲು ಬಂದಾಗ ಆತನಿಗೆ ಹಲ್ಲೆ ನಡೆಸಿರುತ್ತಾರೆ. ನಂತರ ಮೈಮುನ ಅವರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಒಡ್ಡಿ ಹೊಗಿರುತ್ತಾರೆ. ಹಲ್ಲೆಯಿಂದ ಅಸ್ವಸ್ಥಗೊಂಡ ಮೈಮುನ ಅವರ ಮಗನನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 114/2023 ಕಲಂ:143,147,148,448,354,324,504,506,149 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಗತಿಯಲ್ಲಿದೆ.

Leave a Reply

Your email address will not be published. Required fields are marked *

error: Content is protected !!