ಕರಾವಳಿ

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಉದ್ಘಾಟನೆ

ಪುತ್ತೂರು: ಚಿಕ್ಕಂದಿನಲ್ಲಿ ಕಲಿತ ಪಾಠ, ಬೋಧನೆ ಎಲ್ಲವೂ ಮನದಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಪ್ರೈಮರಿ ತರಗತಿಗಳ ಎಲ್ಲಾ ಪಠ್ಯಗಳ ಹಾಡುಗಳು ನನಗೀನ ನೆನಪಿನಲ್ಲಿ ಅಚ್ಚಳಿಯದೆ ಇದೆ. ಆದರೆ ಕಾಲೇಜು ಹಂತದಲ್ಲಿ ಕಲಿತ ಹಾಡುಗಳು ಯಾವುದೂ ನೆನಪಲ್ಲಿ ಉಳಿದಿಲ್ಲ. ಸಣ್ಣ ಪ್ರಾಯದಲ್ಲಿ ಕಲಿತ ಯಾವುದೂ ಮರೆತು ಹೋಗುವುದಿಲ್ಲ ಎಂಬುವುದಕ್ಕೆ ನಾನೇ ಉದಾಹರಣೆ, ಮರ್ಕಝ್ ಸಂಸ್ಥೆಯಲ್ಲಿ ಹೈಸ್ಕೂಲ್ ವಿಭಾಗ ಆರಂಭ ಮಾಡುವ ಮೂಲಕ ಟೀನೇಜ್ ಹಂತದಲ್ಲೇ ವಿದ್ಯಾರ್ಥಿನಿಯರನ್ನು ಉತ್ತಮವಾಗಿ ಬೆಳೆಸಿ ಎತ್ತರಕ್ಕೇರಿಸಲು ಉತ್ತಮ ವೇದಿಕೆ ದೊರಕಿದ್ದು ಸಂಸ್ಥೆಯ ಈ ಹೊಸ ಆರಂಭ ಕ್ರಾಂತಿಯ ಹೆಜ್ಜೆಯಾಗಿದೆ ಎಂದು ಹುಬ್ಬಳ್ಳಿ ನೆಹರೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಯೂಸುಫ್ ಸುಳ್ಯ ಹೇಳಿದರು. ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕ್ಯಾಂಪಸ್‌ನಲ್ಲಿ ಜೂ.11ರಂದು ನಡೆದ ಗರ್ಲ್ಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಹೊಸ ಯುಗಾರಂಭ-ಸ್ವಾಲಿಹ್ ಬೆಳ್ಳಾರೆ
ಉದ್ಘಾಟನಾ ಭಾಷಣ ನೆರವೇರಿಸಿದ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಮಾತನಾಡಿ 25 ವರ್ಷಗಳ ಹಿಂದೆ ಪ್ರಾರಂಭಗೊಂಡ ಮರ್ಕಝ್ ಸಂಸ್ಥೆ ಇಂದು ಎತ್ತರಕ್ಕೆ ಬೆಳೆದು ನಿಂತಿದೆ. ಮಹಿಳೆಯರಿಗೆ ಬೇಕಾದ ವಿವಿಧ ಕೋರ್ಸ್‌ಗಳು ಇಲ್ಲಿದ್ದು ಸಮಾಜಕ್ಕೆ ಈ ಸಂಸ್ಥೆ ಅಭಿಮಾನವಾಗಿ ಮೂಡಿ ಬಂದಿದೆ. ಹೈಸ್ಕೂಲ್ ಆರಂಭ ಹೊಸ ಯುಗವೊಂದರ ಉದಯವಾಗಿದ್ದು ಈ ಸಂಸ್ಥೆಯನ್ನು ಮತ್ತಷ್ಟು ಬೆಳೆಸೋಣ ಎಂದು ಹೇಳಿದರು.

 



ಹೈಸ್ಕೂಲ್‌ಗೆ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ-ಝೈನಿ
ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಎಂಎಸ್‌ಎಂ ಅಬ್ದುರ್ರಶೀದ್ ಝೈನಿ ಮಾತನಾಡಿ ಸಂಸ್ಥೆಯಲ್ಲಿ ಹೈಸ್ಕೂಲ್ ಆರಂಭ ಮಾಡುವ ಸಂದೇಶದ ಒಂದು ಪೋಸ್ಟರ್ ವಾಟ್ಸಪ್‌ನಲ್ಲಿ ಹಾಕಿದಾಗ ಒಂದೇ ದಿನ ನೂರಾರು ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ವಿಚಾರಣೆ ನಡೆಸಿದರು. ಮರ್ಕಝ್ ಸಮಾಜಕ್ಕೆ ಏನನ್ನು ನೀಡಿದೆ ಎಂಬುದಕ್ಕೆ ಈ ವಿಚಾರಣಾ ಪ್ರಕ್ರಿಯೇ ಸಾಕ್ಷಿ. ಎರಡೂವರೆ ದಶಕಗಳ ಈ ಸೇವೆಯ ಸಾಧನೆಗೆ ಕಿರೀಟ ಎಂಬಂತೆ ಇದೇ ಡಿಸೆಂಬರ್ 11, 12, 13 ರಂದು ಮೂರು ದಿನಗಳ ಬೆಳ್ಳಿಹಬ್ಬ ಸಂಭ್ರಮ ನಡೆಯಲಿದ್ದು ಎಲ್ಲರೂ ಇದನ್ನು ಯಶಸ್ವಿಗೊಳಿಸಿಕೊಡಬೇಕೆಂದು ವಿನಂತಿಸಿದರು.





ವಿದ್ಯಾರ್ಥಿನಿಯರಿಂದಲೇ ಉದ್ಘಾಟನೆ!
ಹೈಸ್ಕೂಲ್ ವಿಭಾಗದ ಸಾಂಕೇತಿಕ ಉದ್ಘಾಟನೆಯನ್ನು ನೂತನವಾಗಿ ಸೇರ್ಪಡೆಗೊಂಡ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಝಾರಾ ಬೆಂಗಳೂರು, ಮುಜೀದ ಕೊಡಗು, ನೌಶಿಯಾ ಶೇಕಮಲೆ, ಫಾತಮತ್ ಶಝ ಕೊಯ್ಲ, ಹೈರಾ ಫಾತಿಮ ಪರ್ಲಡ್ಕ, ಫಾತಿಮತ್ ಹಾಜಿಲಾ , ಜುಮಾನ ಅಮ್ಚಿನಡ್ಕ ಮುಂತಾದವರು ರಿಬ್ಬನ್ ಎಳೆಯುವ ಮೂಲಕ ಉದ್ಘಾಟಿಸಿದರು. ಹೈಸ್ಕೂಲ್ ವಿದ್ಯಾರ್ಥಿನಿಯರಿಂದಲೇ ಉದ್ಘಾಟನೆ  ನಡೆಸಿದ ವಿನೂತನ ಕಾರ್ಯಕ್ಕೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.





ಗಮನ ಸೆಳೆದ ಮೋಡೆಲ್ ರಚನೆ:
ಪದವಿಪೂರ್ವ ವಿಭಾಗದ ವಿದ್ಯಾರ್ಥಿನಿಯರಾದ ಅಯಿಝ್ಝ, ಸಫ್ವಾನ, ಹುನೈದಾ, ಮರಿಯಾ, ಬರೀದ, ಫಹಿಮಾ, ಆಯಿಶಾ, ಸುಹೈಲಾ, ಶಿಫಾ, ಹಮೀದ ಹಾಗೂ ಥಿಯೋಲಜಿ ವಿದ್ಯಾರ್ಥಿನಿ ಅನ್ಹ ಇವರು ರಚಿಸಿದ ಸಂಸ್ಥೆ ವಿದ್ಯಾರ್ಥಿನಿಯರಿಗೆ ನೀಡುವ ಸ್ಟಡೀ ನೋಟ್ ಬುಕ್ ಮೋಡೆಲ್ ನ ಮಾದರಿ ರಚನೆ ಮಾಡಿ ಅದರಲ್ಲಿ ಉದ್ಘಾಟನೆ ನಿರ್ವಹಿಸಲಾಗಿದ್ದು ಇದು ಗಮನ ಸೆಳೆಯಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ವಹಿಸಿದ್ದರು. ಥಿಯೋಲಜಿ ಶರೀಅತ್ ವಿಭಾಗದ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ ಪ್ರಾರ್ಥನೆ ನೆರವೇರಿಸಿದರು. ಚಿಂತಕ ಇಬ್ರಾಹಿಂ ಶಾಮಿಲಿ ಫೈಝಿ, ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ನೌಶಾದ್ ಪೋಳ್ಯ, ಪದವಿ ವಿಭಾಗದ ಪ್ರಾಂಶುಪಾಲ ಮುಹಮ್ಮದ್ ಮನ್ಸೂರ್ ಕಡಬ, ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಸಂಧ್ಯಾ ಮುಂತಾದವರು ಸಾಂದರ್ಭಿಕವಾಗಿ ಮಾತನಾಡಿದರು.



ಎಂಎಚ್‌ಕೆ ಇದರ ಜೆಸಿಸಿ ಆರ್ಗನೈಸರ್ ಶಂಸುದ್ದೀನ್ ಬೈರಿಕಟ್ಟೆ, ಮರ್ಕಝುಲ್ ಹುದಾ ಸದಸ್ಯ ಕರೀಂ ಹಾಜಿ, ಸಂಸ್ಥೆಯ ಥಿಯೋ ವಿಭಾಗದ ಉಪಪ್ರಾಂಶುಪಾಲರಾದ ಜಲೀಲ್ ಸಖಾಫಿ ಅಡ್ಕಾರ್, ಆಟಕೋಯ ತಂಙಳ್ ಪಮ್ಮಲೆ, ಬೆಳ್ಳಾರೆ ಹಿಕ್ಮಾ ಸ್ಕೂಲ್‌ನ ಮುಖ್ಯ ಶಿಕ್ಷಕಿ ಸಬೀದಾ ಬೆಳ್ಳಾರೆ ಸಂಸ್ಥೆಯ ಮುದರ್ರಿಸ್ ಹನೀಫ್ ಕಾಮಿಲ್ ಸಖಾಫಿ ತುರ್ಕಳಿಕೆ ಉಪಸ್ಥಿತರಿದ್ದರು.
ಪದವಿಪೂರ್ವ ವಿಭಾಗದ ಉಪಪ್ರಾಂಶುಪಾಲರಾದ ಪ್ರತಿಭಾ ರೈ ಕಾರ್ಯಕ್ರಮ ನಿರ್ವಹಿಸಿದರು. ದ್ವಿತೀಯ ಪದವಿಪೂರ್ವ ವಿಭಾಗದ ವಿದ್ಯಾರ್ಥಿನಿಯರು ನೂತನ ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ವೆಲ್ಕಂ ಗುಚ್ಚ ನೀಡಿ ಸ್ವಾಗತಿಸಿದರು. ಫಸೀಲ, ಸ್ವಪ್ನ, ರಝೀನ ಮುಂತಾದವರು ಪ್ರಾರ್ಥನೆ ಮತ್ತು ಭಕ್ತಿ ಗೀತೆ ಹಾಡಿದರು.

Leave a Reply

Your email address will not be published. Required fields are marked *

error: Content is protected !!