ವಿಡಿಯೋ ಮಾಡಿ ಬಳಿಕ ವಿಷ ಸೇವಿಸಿದ್ದ ಕಟ್ಟತ್ತಾರಿನ ನಾಸಿರ್ ಮೃತ್ಯು
ಪುತ್ತೂರು: ಕೆಲ ದಿನಗಳ ಹಿಂದೆ ವೀಡಿಯೋ ಮಾಡಿ ವಿಷ ಸೇವಿಸುವುದಾಗಿ ತಿಳಿಸಿ ಬಳಿಕ ವಿಷ ಸೇವಿಸಿದ್ದ ಮಾಡಾವು ಕಟ್ಟತ್ತಾರು ನಿವಾಸಿ ನಾಸಿರ್ ಭಾನುವಾರ ಮಧ್ಯಾಹ್ನ ಮಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಂಗಳವಾರ ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೀವನ್ಮರಣ ಸ್ಥಿತಿಯಲ್ಲಿದ್ದ ಅವರು ಇದೀಗ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ತಾನು ಚಾಲಕ ವೃತ್ತಿ ಮಾಡುತ್ತಿದ್ದು, ಮಾಲಕರು ತನಗೆ ಹಲ್ಲೆ ನಡೆಸಿದ್ದಾರೆ. ಆದ್ದರಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೋದಲ್ಲಿ ಹೇಳಿಕೊಂಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮೃತರ ದಫನ ಕಾರ್ಯ ಅಜ್ಜಿಕಟ್ಟೆ ಮಸೀದಿಯ ದಫನಭೂಮಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.