ಕರಾವಳಿರಾಜಕೀಯ

ಸುಳ್ಯ‌ದಲ್ಲಿ ಬ್ಲಾಕ್ ಕಾಂಗ್ರೆಸ್ ಸಭೆ ಆರಂಭ : ಉಸ್ತುವಾರಿ ಮಮತಾ ಗಟ್ಟಿ ನೇತೃತ್ವಸಭೆಗೆ ಮಾಧ್ಯಮಗಳಿಗೆ ಪ್ರವೇಶ ನಿರಾಕರಣೆ, ಸಭೆಯ ಆರಂಭದಲ್ಲಿ ಫೋಟೋ ತೆಗೆಯಲು ಮಾತ್ರ ಅನುಮತಿ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೆಪ್ಟೆಂಬರ್ 25ರಂದು ಸುಳ್ಯದ ಸಧರ್ನ್ ರೆಸಿಡೆನ್ಸಿ ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉಸ್ತುವಾರಿ ಮಮತಾ ಗಟ್ಟಿಯವರ ನೇತೃತ್ವದಲ್ಲಿ ನಡೆಯಿತು.

ಕಳೆದ ಕೆಲವು ತಿಂಗಳುಗಳಿಂದ ಸುಳ್ಯ ಬ್ಲಾಕ್ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಗೊಂದಲಗಳು, ಮತ್ತು ಇತ್ತೀಚೆಗೆ ಕಡಬ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಉಂಟಾಗಿರುವ ಮಾತಿನ ಚಕಮಕಿ ಈ ಎಲ್ಲಾ ಕಾರಣಗಳಿಂದ ಇಂದಿನ ಸಭೆಗೆ ಪತ್ರಕರ್ತರನ್ನು ಸಭಾ ಕಾರ್ಯಕ್ರಮಕ್ಕೆ ತೆರಳು ಅನುಮತಿ ನೀಡಲಿಲ್ಲ.

ಸಭೆಗೆ ವರದಿ ಮಾಡಲು ಅನುಮತಿ ನಿರಾಕರಿಸಿದ ಬಗ್ಗೆ ಮಮತಾ ಗಟ್ಟಿಯವರ ಬಳಿ ಪತ್ರಕರ್ತರೊಬ್ಬರು ಕೇಳಿದಾಗ ಸಭೆಗೆ ಅವಕಾಶವನ್ನು ನೀಡದೆ ಇರುವುದು ನನಗೂ ಕೂಡ ತಿಳಿದು ಬಂದಿದೆ. ಆದರೆ ಸಭೆಯ ಬಳಿಕ ನಾವು ಪತ್ರಿಕಾಗೋಷ್ಠಿ ನಡೆಸಲು ಸಮಯ ಕೇಳಿದ್ದರಿಂದ ಪತ್ರಿಕಾಗೋಷ್ಠಿಯಲ್ಲಿ ಸಭೆಯ ತೀರ್ಮಾನದ ಬಗ್ಗೆ ಹೇಳುತ್ತೇವೆ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತಗೊಂಡಂತಹ ಅಭ್ಯರ್ಥಿ ಕೃಷ್ಣಪ್ಪ ಸಹಿತ ಕಾಂಗ್ರೆಸ್ ನಾಯಕರು ಭಾಗವಹಿಸುತ್ತಿದ್ದಾರೆ.

ಉಚ್ಚಾಟನೆ ಗೊಳಗಾಗಿರುವ ಕಾಂಗ್ರೆಸ್ ನಾಯಕರೂ ಕೂಡಾ ಸಭೆಯಲ್ಲಿ ಭಾಗವಹಿಸಿದ್ದು ಸಭೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದಾರೆ.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಪ್ರಮುಖರಾದ ರಾಜೀವಿ ಆರ ರೈ, ಗೀತಾ ಕೋಲ್ಚಾರ್, ಭರತ್ ಮುಂಡೋಡಿ, ಪಿ.ಎಸ್.ಗಂಗಾಧರ್, ಸದಾನಂದ ಮಾವಜಿ ಹಾಗೂ ಶಿಸ್ತು ಕ್ರಮಕ್ಕೆ ಒಳಗಾಗಿರುವ ಎಂ.ವೆಂಕಪ್ಪ ಗೌಡ, ಮಹೇಶ್ ಕುಮಾರ್ ಕರಿಕ್ಕಳ, ಕೆ ಗೋಕುಲ್ ದಾಸ್, ಭವಾನಿ ಶಂಕರ್ ಕಲ್ಮಡ್ಕ ಸೇರಿದಂತೆ ಹಲವಾರು ಮಂದಿ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!