ಅಂತಾರಾಷ್ಟ್ರೀಯ

ಮದುವೆ ಸಮಾರಂಭದಲ್ಲಿ ಬೆಂಕಿ ಅವಘಡ: 100 ಮಂದಿ ಸಾವು 150ಕ್ಕೂ ಹೆಚ್ಚು ಮಂದಿಗೆ ಗಾಯ



ಮದುವೆ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡು 100 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಇರಾಕ್ನ ಹಮ್ದುನಿಯಾಹ್ ಪಟ್ಟಣದ ಈವೆಂಟ್ ಹಾಲ್ನಲ್ಲಿ ಮೊಸುಲ್ ನಗರದ ಹೊರ ವಲಯದಲ್ಲಿ ಸಂಭವಿಸಿದೆ.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟಾಕಿ ಸಿಡಿಸುವಾಗ ಮದುವೆ ಮಂಟಪಕ್ಕೆ ಬೆಂಕಿ ತಗುಲಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಮದುವೆ ಕಾರ್ಯಕ್ರಮದಲ್ಲಿ 750 ಮಂದಿ ಭಾಗಿಯಾಗಿದ್ದರು ಎಂದು ವರದಿಯಾಗಿದೆ.
ವಧು-ವರರು ಕೂಡ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!