ಕರಾವಳಿ

ಸಹೋದರರಿಂದ ಕೊಲೆಯಾದ ಸಂಪ್ಯದ ಉಸ್ಮಾನ್: ಸಂಪ್ಯ ಮಸೀದಿ ಖಬರ್ ಸ್ಥಾನದಲ್ಲಿ ದಫನ ಕಾರ್ಯ

ಪುತ್ತೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಜು.14ರಂದು ಸಂಪಾಜೆ ಸಮೀಪದ ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಸಹೋರರಿಂದಲೇ ಕೊಲೆಯಾದ ಸಂಪ್ಯದ ಉಸ್ಮಾನ್ ಅವರ ಮೃತದೇಹ ಜು.14ರಂದು ರಾತ್ರಿ 10.30ರ ಅಂದಾಜು ಸಂಪ್ಯ ಮಸೀದಿ ತಲುಪಿದ್ದು ಆ ಬಳಿಕ ಧಾರ್ಮಿಕ ವಿಧಿವಿಧಾನ ಬಳಿಕ ಮೃತದೇಹವನ್ನು ಸಂಪ್ಯ ಮಸೀದಿಗೊಳಪಟ್ಟ ಜಾಗದಲ್ಲಿ ದಫನ ಮಾಡಲಾಯಿತು. 

ಈ ಸಂದರ್ಭದಲ್ಲಿ ಸಂಪ್ಯ ಜಮಾಅತರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು. ಉಸ್ಮಾನ್ ಅವರನ್ನು ಜಾಗದ ವಿಚಾರದಲ್ಲಿ ಸಹೋದರರಾದ ಸತ್ತಾರ್ ಮತ್ತು ರಫೀಕ್ ಅವರು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. 

Leave a Reply

Your email address will not be published. Required fields are marked *

error: Content is protected !!