ನ್ಯೂಜಿಲೆಂಡ್-ಪಾಕ್ ನಡುವಿನ ಪಂದ್ಯಾಟದ ವೇಳೆ ಅಂಪೈರ್ ಕಾಲಿಗೆ ಬಡಿದ ಚೆಂಡು..! ಕೋಪಗೊಂಡ ಅಂಪೈರ್ ಮಾಡಿದ್ದೇನು ಗೊತ್ತಾ..?
ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಅಂಪೈರ್ ತೀವ್ರ ಕೋಪಗೊಂಡ ಘಟನೆ ನಡೆದಿದ್ದು ಆಟಗಾರನೊಬ್ಬನ ಸ್ವೆಟರ್ ನ್ನು ಕೋಪದಿಂದ ನೆಲಕ್ಕೆಸೆದ ಘಟನೆ ನಡೆದಿದೆ.

ಆಟಗಾರನೊಬ್ಬ ಎಸೆದ ಚೆಂಡು ಅಂಪೈರ್ ಅಲೀಂ ಧರ್ ಅವರ ಕಾಲಿಗೆ ಬಡಿಯಿತು. ಈ ವೇಳೆ ಅಲೀಂ ಧರ್ ತೀವ್ರ ಕೋಪಗೊಂಡರು.
ನ್ಯೂಜಿಲೆಂಡ್ ಇನ್ನಿಂಗ್ಸ್‌ನ 36ನೇ ಓವರಿನಲ್ಲಿ ಗ್ಲೆನ್ ಫಿಲಿಪ್ಸ್ ಹೊಡೆದ ಚೆಂಡನ್ನು ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಹಿಡಿದ ಮೊಹಮ್ಮದ್ ವಾಸಿಂ ವೇಗವಾಗಿ ಥ್ರೋ ಮಾಡಿದರು. ಚೆಂಡು ವಿಕೆಟ್ ಗೆ ಸಿಗದೇ ಅಂಪೈರ್ ಕಾಲಿಗೆ ಬಡಿಯಿತು. ಅತೀವ ನೋವು ಅನುಭವಿಸಿದ ಅಲೀಂ ಧರ್ ಕೋಪದಿಂದ ತಮ್ಮ ಕೈಯಲ್ಲಿದ್ದ ಆಟಗಾರನೊಬ್ಬನ ಸ್ವೆಟರ್ ನ್ನು ನೆಲಕ್ಕೆ ಎಸೆದರು.
ಮಸಾಜ್ ಮಾಡಿದ ಆಟಗಾರ:
ಅಂಪೈರ್ ಕಾಲಿಗೆ ಪೆಟ್ಟು ಬಿದ್ದಿರುವುದನ್ನು ಅರಿತ ಪಾಕ್ ವೇಗಿ ನಸೀಂ ಶಾ ಹತ್ತಿರ ಬಂದು ಅಂಪೈರ್ ಕಾಲಿಗೆ ಮಸಾಜ್ ಮಾಡಿದರು. ಫಿಸಿಯೊ ಕೂಡಾ ಮೈದಾನಕ್ಕೆ ಆಗಮಿಸಿ ಚಿಕಿತ್ಸೆ ನೀಡಿದರು. ಅಲ್ಪ ಹೊತ್ತಿನ ಬಳಿಕ ಪಂದ್ಯ ಮತ್ತೆ ಆರಂಭವಾಯಿತು.