ಇಕ್ಬಾಲ್ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯತ್ವ ರದ್ದು
ಸುಳ್ಯ: ಬೆಳ್ಳಾರೆ ಗ್ರಾಮ ಪಂಚಾಯತ್‌ನ 1ನೇ ವಾರ್ಡ್ ಚುನಾಯಿತ ಸದಸ್ಯ ಕೆ.ಮುಹಮ್ಮದ್ ಇಕ್ಬಾಲ್‌ರ ಸದಸ್ಯತ್ವವನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ ಎಂದು ತಿಳಿದು ಬಂದಿದೆ.

ಮಹಮ್ಮದ್ ಇಕ್ಬಾಲ್ 2024-25ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆಯ ಘೋಷಣೆಯನ್ನು ನಿಗದಿತ ಅವಧಿಯೊಳಗೆ ದಾಖಲು ಮಾಡದೇ ಇರುವ ಕಾರಣ, ರಾಜ್ಯ ಚುನಾವಣಾ ಆಯೋಗವು ಉಲ್ಲೇಖದ ಆದೇಶದಂತೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಬಿ)(4)ರಡಿ ಅವರನ್ನು ಗ್ರಾಪಂ ಸದಸ್ಯತ್ವದಿಂದ ಅನರ್ಹಗೊಳಿಸಿದೆ ಎಂದು ತಿಳಿದು ಬಂದಿದೆ. 2022ರಲ್ಲಿ ನಡೆದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಂಧನಗೊಂಡಿರುವ ಮುಹಮ್ಮದ್ ಇಕ್ಬಾಲ್ ರ ಗ್ರಾಪಂ ಸದಸ್ಯತ್ವ ರದ್ದುಗೊಂಡಿದೆ.