ಕಬಿನಿ ಹಿನ್ನೀರಿನ ದಡದಲ್ಲಿ ಜಿಂಕೆ ಮರಿಯನ್ನು ಹುಲಿ ಬೇಟೆಯಾಡಿದ ಚಿತ್ರ ಛಾಯಾಗ್ರಾಹಕರ ಕ್ಯಾಮರಾದಲ್ಲಿ ಸೆರೆ
ಎಚ್ ಡಿ ಕೋಟೆ ನಾಗರಹೊಳೆ ಸಮೀಪ ಕಬಿನಿ ನದಿಯ ಹಿನ್ನೀರಿನ ದಡದಲ್ಲಿ ಹುಲಿಯೊಂದು ಜಿಂಕೆಮರಿಯನ್ನು ಬೇಟೆಯಾಡಿದ ದೃಶ್ಯ ಸ್ಥಳೀಯ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ.
ತಾಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರದಲ್ಲಿ ಮಣಿಕಂಠ ಎಂಬುವವರ ಕ್ಯಾಮರಕ್ಕೆ ಈ ದೃಶ್ಯ ಸೆರೆಹಿಡಿಯಲು ಲಭಿಸಿದೆ.
ಇಲ್ಲಿ ಉದ್ಯಾನವನದ ಹರಿಣಿ ಎಂಬ ಹುಲಿಯು ಇತ್ತೀಚೆಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು ಹರಿಣಿ ತನ್ನ ಮಕ್ಕಳಿಗೆ ಆಹಾರವನ್ನು ನೀಡಲು ಈ ರೀತಿಯ ವನ್ಯ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಮರಿಗಳಿಗೆ ಆಹಾರವನ್ನಾಗಿ ನೀಡುತ್ತಿದೆ.
ಮಂಗಳವಾರ ಸಂಜೆ 5 ಗಂಟೆಗೆ ತೆರಳಿದ್ದ ಪ್ರವಾಸಿಗರಿಗೆ ಈ ದೃಶ್ಯ ಕಂಡು ಬಂದಿದೆ. ಕಳೆದ ಕೆಲವು ದಿನಗಳಿಂದ ಹರಿಣಿಯ ಈ ರೀತಿಯ ಬೇಟೆಯನ್ನು ವೀಕ್ಷಿಸಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಛಾಯಾಗ್ರಹಕರು ಇದೀಗ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.