ಸಿ.ಎಸ್.ಡಬ್ಯು.ಸಿ ಫಾಳಿಲಾ-ಫಳೀಲಾ ಕರ್ನಾಟಕ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
ಪುತ್ತೂರು: ಸಮಸ್ತ ಅಧೀನದ ಫಾಳಿಲಾ-ಫಳೀಲಾ ವುಮೆನ್ಸ್ ಕಾಲೇಜ್‌ಗಳ ಒಕ್ಕೂಟವಾದ ಸಿ.ಎಸ್.ಡಬ್ಯು.ಸಿ ಇದರ ಕರ್ನಾಟಕ ಝೋನಲ್ ಸಮಿತಿಯ ವಾರ್ಷಿಕ ಮಹಾ ಸಂಗಮ ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಿತು.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅಧ್ಯಕ್ಷತೆಯನ್ನು ವಹಿಸಿದ್ದರು. ಸಿ.ಎಸ್.ಡಬ್ಯು.ಸಿ ಕೇಂದ್ರೀಯ ನಾಯಕರಾದ ಚುಂಗತ್ತರ ಫೈಝಿ, ಸಅದ್ ಫೈಝಿ ಮಲಪ್ಪುರಂ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಮೊದಲಾದವರು ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ವರದಿ ಮಂಡಿದಿದರು. ಕೇಂದ್ರೀಯ ಘಟಕದ ಚುನಾವಣಾ ವೀಕ್ಷಕರಾಗಿ ಜುನೈದ್ ಪಾರಪಳ್ಳಿ ಅವರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಸಲಹೆಗಾರರಾಗಿ ಬಂಬ್ರಾಣ ಉಸ್ತಾದ್ ಮತ್ತು ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ಅಧ್ಯಕ್ಷರಾಗಿ ಅಶ್ರಫ್ ಹಾಜಿ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ.ಎ ಕೊಡುಂಗಾಯಿ ಫಾಝಿಲ್ ಹನೀಫಿ, ಕೋಶಾಧಿಕಾರಿಯಾಗಿ ದಾವುದುಲ್ ಹಕೀಂ ಹನೀಫಿ ಮಿತ್ತಬೈಲು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸಯ್ಯಿದ್ ತ್ವಾಹ ಜಿಫ್ರಿ ತಂಙಳ್ ಬೆಳ್ತಂಗಡಿ ಮತ್ತು ಅಬ್ದುಲ್ ಅಝೀಝ್ ಆತೂರು, ಜೊತೆ ಕಾರ್ಯದರ್ಶಿಗಳಾಗಿ ತಮ್ಲಿಖ್ ದಾರಿಮಿ ಕೊಡಗು ಮತ್ತು ಅಬ್ದುರ್ರಶೀದ್ ಹನೀಫಿ ಸಜಿಪ, ಪರೀಕ್ಷಾ ಬೋರ್ಡ್ ಮತ್ತು ಐ.ಟಿ ಚೇರ್‌ಮೇನ್ ಆಗಿ ಇಬ್ರಾಹಿಂ ಬಾತಿಷಾ ಅಝ್ಹರಿ ಉಪ್ಪಿನಂಗಡಿ, ಪರೀಕ್ಷಾ ಬೋರ್ಡ್ ಮತ್ತು ಐ.ಟಿ ಕನ್ವೀನರ್ ಆಗಿ ತಾಜುದ್ದೀನ್ ರಹ್ಮಾನಿ ದೇರಳಕಟ್ಟೆ ಹಾಗೂ ವಿವಿಧ ಕಾಲೇಜುಗಳಿಂದ ಆರು ಮಂದಿ ಕೌನ್ಸಿಲ್ ಸದಸ್ಯರನ್ನು ಆಯ್ಕೆ ಮಾಡಲಾಯಿತು.