ಗಾಜಾದ ಆಸ್ಪತ್ರೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಐವರು ಪತ್ರಕರ್ತರು ಸೇರಿ 20 ಮಂದಿ ಮೃತ್ಯು
ದಕ್ಷಿಣ ಗಾಜಾದ ಮುಖ್ಯ ಆಸ್ಪತ್ರೆಯ ನಾಲ್ಕನೇ ಮಹಡಿಯ ಮೇಲೆ ಸೋಮವಾರ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಐವರು ಪತ್ರಕರ್ತರು ಸೇರಿದಂತೆ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ನಾಸರ್ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿದ್ದ 20 ಜನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಮೊದಲು ಒಂದು ಕ್ಷಿಪಣಿ ಆಸ್ಪತ್ರೆಗೆ ಅಪ್ಪಳಿಸಿತು. ನಂತರ ರಕ್ಷಣಾ ಸಿಬ್ಬಂದಿ ಆಗಮಿಸುತ್ತಿದ್ದಂತೆ ಮತ್ತೊಂದು ಕ್ಷಿಪಣಿ ಅಪ್ಪಳಿಸಿದೆ ಎಂದು ವರದಿಯಾಗಿದೆ.
ದಕ್ಷಿಣ ಗಾಜಾದ ಅತಿ ದೊಡ್ಡ ಆಸ್ಪತ್ರೆಯಾಗಿರುವ ನಾಸರ್ ಆಸ್ಪತ್ರೆ, ಕಳೆಗ 22 ತಿಂಗಳಿಂದ ಹಲವು ದಾಳಿಗಳು ಮತ್ತು ಬಾಂಬ್ ದಾಳಿಯನ್ನು ಎದುರಿಸಿದೆ.
ಆಸ್ಪತ್ರೆ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಐವರು ಪತ್ರಕರ್ತರು ಸೇರಿದ್ದಾರೆ.