ಆರೋಗ್ಯಕರಾವಳಿ

ಅ.17: ಪುತ್ತೂರಿನಲ್ಲಿ ಡಾ|ಹಸನ್ ಸಾಲಿಯವರ ಹೆಲ್ತ್‌ನಿಕ್ ಹೆಲ್ತ್‌ಕೇರ್ ಶುಭಾರಂಭ

ಪುತ್ತೂರು: ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯ ಮಾಜಿ ಮುಖ್ಯ ವೈದ್ಯಾಧಿಕಾರಿ ಡಾ ಹಸನ್ ಸಾಲಿ(ಬಿಎಎಂಎಸ್, ಎಂಡಿಸಿಟಿ)ಯವರ ಹೆಲ್ತ್‌ನಿಕ್ ಹೆಲ್ತ್‌ಕೇರ್ ಅ.17ರಂದು ಬಪ್ಪಳಿಗೆ ಸಮೃದ್ಧಿ ಬೈಪಾಸ್ ಸೆಂಟರ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಉಡುಪಿ-ಹಾಸನ-ಚಿಕ್ಕಮಗಳೂರು ಜಿಲ್ಲಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಶುಭಾಶೀರ್ವಚನ ನೀಡಲಿದ್ದಾರೆ.

ಶಾಸಕ ಸಂಜೀವ ಮಠಂದೂರು, ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಜನರಲ್ ಫೀಸೀಶಯನ್ ಡಾ| ಯು ಶ್ರೀಪತಿ ರಾವ್, ದ.ಕ ಜಿಲ್ಲಾ ಟಿ.ಬಿ ಆಫೀಸರ್ ಡಾ| ಬದ್ರುದ್ದೀನ್ ಎಂ.ಎನ್, ಪುತ್ತೂರು ಚೇತನಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ| ಶ್ರೀಕಾಂತ್ ರಾವ್, ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ ಮಹಮ್ಮದ್ ಹಾಜಿ, ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ|ಫಾ| ವಿಜಯ ಹಾರ್ವಿನ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಡಾ| ಹಸನ್ ಸಾಲಿರವರು ಪ್ರತೀ ಸೋಮವಾರದಿಂದ ಶನಿವಾರದವರೆಗೆ ಅಪರಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಮತ್ತು ಆದಿತ್ಯವಾರ ಬೆಳಿಗ್ಗೆ ಗಂಟೆ 8-30ರಿಂದ ಮದ್ಯಾಹ್ನ ಗಂಟೆ 12ರ ವರೆಗೆ ವೈದ್ಯಕೀಯ ಸೇವೆಗೆ ಲಭ್ಯರಿರಲಿದ್ದಾರೆ.

ವೈದ್ಯರ ಸಂದರ್ಶನ, ವೂಂಡ್ ಡ್ರೆಸ್ಸಿಂಗ್, ಕಪ್ಪಿಂಗ್ ಥೆರಫಿ, ರಕ್ತ ಶುಗರ್ ಪರೀಕ್ಷೆ, ನೆಬುಲೈಝೇಷನ್, ಫಾರ್ಮಸಿ ಮುಂತಾದ ಸೇವೆಗಳು ಕ್ಲಿನಿಕ್‌ನಲ್ಲಿ ಲಭ್ಯವಿರಲಿದೆ ಎಂದು ಹೆಲ್ತ್‌ನಿಕ್ ಹೆಲ್ತ್‌ಕೇರ್‌ನ ಮಾಲಕರಾದ ಡಾ| ಹಸನ್ ಸಾಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!