ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ಪರ್ಲಡ್ಕ ಸರಕಾರಿ ಹಿ.ಪ್ರಾ ಶಾಲೆಯಲ್ಲಿ “ನಾವು ಮನುಜರು” ಕಾರ್ಯಕ್ರಮ
ಪುತ್ತೂರು: ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಮತ್ತು ಸಂಚಲನ ಮಂಗಳೂರು ಮೂಲಕ ಪುತ್ತೂರು ಪರ್ಲಡ್ಕ ದ ಕ ಜಿ ಪ. ಸ ಹಿ. ಪ್ರಾಥಮಿಕ ಶಾಲೆ ಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾತಂತ್ರೋತ್ಸವದ ಪ್ರಯುಕ್ತ ರಸ ಪ್ರಶ್ನೆ ಮತ್ತು “ನಾವು ಮನುಜರು” ಕಾರ್ಯಕ್ರಮ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ವತ್ಸಲಾ ನಾಯಕ್ ರವರು ಮಾನವೀಯತೆಯ ಹಾಡಿನೊಂದಿಗೆ ವಿದ್ಯಾರ್ಥಿಗಳನ್ನು ರಂಜಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ಮೊಹಮ್ಮದ್ ರಫೀಕ್ ದರ್ಬೆ ನಮ್ಮ ಪ್ರತೀ ದಿನದ ದಿನಚರಿಯಲ್ಲಿ ಮಾನವೀಯತೆಯನ್ನು ತೊಡಗಿಸುವ ವಿಧಾನವನ್ನು ವಿವರಿಸಿದರು.
ಸಂಪನ್ಮೂಲ ಕೇಂದ್ರದ ಮಾಜಿ ಅಧ್ಯಕ್ಷರಾದ ಹರಿಣಾಕ್ಷಿ ಜೆ ಶೆಟ್ಟಿಯವರು ವಿದ್ಯಾರ್ಥಿಗಳಲ್ಲಿ ನಾವು ಮನುಜರಾಗಿ ಯಾವೆಲ್ಲಾ ರೀತಿಯಲ್ಲಿ ನಡೆದು ಕೊಳ್ಳಲು ಶ್ರಮಿಸಬೇಕು ಎಂಬುವುದರ ಬಗ್ಗೆ ವಿವರಣೆ ನೀಡಿದರು. ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಸುಮಂಗಳ ಶೆಣೈ ಸ್ವಾತಂತ್ರಾ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ ಬಹುಮಾನ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೊಪಾಧ್ಯಾಯಿನಿ ವತ್ಸಲಾ, ಎಸ್.ಡಿ.ಎಮ್.ಸಿ ಅಧ್ಯಕ್ಷ ಪ್ರೇಮಾ ಮತ್ತು ಸಹ ಶಿಕ್ಷಕರು ಸಹಕರಿಸಿದರು.