ಬಂಡೆ ಉರುಳಿ ಬಿದ್ದು ಇಬ್ಬರು ಮಕ್ಕಳು ದಾರುಣ ಸಾವು
ಬಂಡೆ ಉರುಳಿಬಿದ್ದು ಮಕ್ಕಳಿಬ್ಬರು ಸಾವನ್ನಪ್ಪಿದ ದಾರುಣ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ತಾಂಡಾದಲ್ಲಿ ನಡೆದಿದೆ. ಮಂಜುನಾಥ್(9), ವೈಶಾಲಿ(8) ಮೃತ ಮಕ್ಕಳು. ಓರ್ವ ಮಗುವಿನ ಕಾಲು ಮುರಿದಿದ್ದು, ಸದ್ಯ ಗಾಯಾಳು ಮಗುವಿಗೆ ಲಿಂಗಸಗೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಶಾಲೆಗೆ ದಸರಾ ರಜೆ ಹಿನ್ನೆಲೆಯಲ್ಲಿ ಮೂವರು ಮಕ್ಕಳು ಪೋಷಕರ ಜೊತೆಗೆ ಜಮೀನಿಗೆ ಹೋಗಿ ವೇಳೆ ಜಮೀನಿನ ಬದುವಿನಲ್ಲಿ ಹಾಕಲಾಗಿದ್ದ ಕಲ್ಲು ಬಂಡೆಗಳ ಸುತ್ತಮುತ್ತ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಕಲ್ಲು ಬಂಡೆ ಜಾರಿ ಬಿದ್ದು ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.