ಸುಳ್ಯ: ಪೈಚಾರು ಸಮೀಪ ಬೈಕ್’ಗಳ ನಡುವೆ ಢಿಕ್ಕಿ, ಓರ್ವ ಮೃತ್ಯು
ಸುಳ್ಯದ ಪೈಚಾರು ಸಮೀಪ ಆರ್ತಾಜೆ ಬಳಿ ಎರಡು ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿ ಓರ್ವ ಸವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಬೈಕುಗಳು ಅಪಘಾತ ಸಂಭವಿಸಿದ ವೇಳೆ ತೀವ್ರ ಗಾಯವಾಗಿದ್ದ ಒಂದು ಬೈಕಿನ ಸವಾರನನ್ನು ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮತ್ತೊಂದು ಬೈಕಿನಲ್ಲಿ ಇದ್ದ ಇಬ್ಬರು ಸವಾರರೂ ಗಾಯಗೊಂಡಿದ್ದು ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.