ಶ್ರೀರಾಮ ಸೇನೆ ಆರಂಭಿಸಿದ ಹೆಲ್ಪ್‌ಲೈನ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ- ಮುತಾಲಿಕ್
ಹಿಂದೂ ಮಹಿಳೆಯರ ರಕ್ಷಣೆಗಾಗಿ ಹುಬ್ಬಳ್ಳಿ ಸೇರಿದಂತೆ ರಾಜ್ಯದ ನಾಲ್ಕು ಸ್ಥಳಗಳಲ್ಲಿ ಶ್ರೀರಾಮ ಸೇನೆ ಆರಂಭಿಸಿದ ಹೆಲ್ಪ್‌ಲೈನ್ (ಸಹಾಯ ವಾಣಿ) ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದ್ದಾರೆ.

‘ನೇಹಾ ಹಿರೇಮಠ ಪ್ರಕರಣದ ಬಳಿಕ ಒಂದೇ ವಾರದಲ್ಲಿ ಹುಬ್ಬಳ್ಳಿಯಲ್ಲಿ ಐದು ಪ್ರಕರಣಗಳು ನಡೆದಿವೆ. ತಕ್ಷಣ ಇದನ್ನು ಶ್ರೀರಾಮ ಸೇನೆ ಗಂಭೀರವಾಗಿ ಪರಿಗಣಿಸಿ ಹೆಲ್ಪ್ ಲೈನ್ ಆರಂಭಿಸಿದ್ದು ಆ ಬಳಿಕ ಸುಮಾರು 300 ಕರೆಗಳು ಬಂದಿವೆ. ಕರೆ ಮಾಡಿದ ಹಲವಾರು ಮಂದಿ ತಮಗಾದ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಮುತಾಲಿಕ್ ತಿಳಿಸಿದ್ದಾರೆ.