ರಾಜ್ಯ

ಶವರ್ಮ ತಿಂದ ಯುವಕ ಮೃತ್ಯುಚಿಕನ್‌ ಶವರ್ಮ ತಿಂದ ಬಳಿಕ ಅಸ್ವಸ್ಥನಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.

ಈತ ಕಕ್ಕನಾಡ್‌ನ ಮೆವೆಲಿಪುರಂ ಎಂಬಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ಚಿಕನ್ ಶವರ್ಮ ತಿಂದಿದ್ದ, ಆದರೆ ನಂತರ ಆತನ ಆರೋಗ್ಯ ಹದಗೆಟ್ಟಿದ್ದು ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು 22 ವರ್ಷದ ರಾಹುಲ್ ಡಿ. ನಾಯರ್ ಎಂದು ಗುರುತಿಸಲಾಗಿದೆ.

ಕೊಚ್ಚಿನ್‌ನ ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಿಸಿದ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ. ಪ್ರಾಥಮಿಕ ವರದಿಯ ಪ್ರಕಾರ ದೇಹದೊಳಗೆ ಆಗಿರುವ ಸೆಪ್ಟಿಕ್ ಅವರ ಸಾವಿಗೆ ಕಾರಣವಾಗಿದೆ. ಇದು ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರುವ ಗಂಭೀರ ಸೋಂಕು ಆಗಿದೆ ಎನ್ನಲಾಗಿದೆ.

ಅಕ್ಟೋಬರ್ 22 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಯಿತು ಮತ್ತು ತಕ್ಷಣವೇ ವೆಂಟಿಲೇಟರ್  ಹಾಕಲಾಯಿತು. ಆದರೆ ಯಾವುದೇ ಚೇತರಿಕೆ ಕಂಡುಬರಲಿಲ್ಲ, ರಕ್ತ ಪರೀಕ್ಷೆಯಲ್ಲಿ ಆಹಾರ ವಿಷವಾಗಿರುವುದು ಧೃಡಪಟ್ಟಿದೆ.

Leave a Reply

Your email address will not be published. Required fields are marked *

error: Content is protected !!