ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ, ಉದ್ಯಮಿ ಮಮ್ತಾಜ್ ಅಲಿ ನಾಪತ್ತೆ, ಸೇತುವೆ ಬಳಿ ಕಾರು ಪತ್ತೆ
ಮಂಗಳೂರಿನ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ, ಉದ್ಯಮಿ ಮುಮ್ತಾಜ್ ಅಲಿ, ಕೂಳೂರು ಸೇತುವೆಯ ಬಳಿ ನಾಪತ್ತೆಯಾಗಿದ್ದಾರೆ. ಇಂದು ಮುಂಜಾನೆ ಕದ್ರಿ ಅಗ್ನಿಶಾಮಕ ಠಾಣೆಗೆ ಕರೆ ಬಂದಿದ್ದು, ಮುಮ್ತಾಜ್ ಅಲಿ ಅವರ ಬಿಎಂಡಬ್ಲ್ಯೂ ಕಾರು ಸೇತುವೆಯ ಬಳಿ ಪತ್ತೆಯಾಗಿದೆ.
ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ಠಾಣೆಗಳ ಸಿಬ್ಬಂದಿ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಬಂದು 2 ಬೋಟ್‌ಗಳೊಂದಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈವರೆಗೆ ಮುಮ್ತಾಜ್ ಅಲಿ ಪತ್ತೆಯಾಗಿಲ್ಲ.