ಕರಾವಳಿ

ಹಿಂದುತ್ವಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ದ-ಅರುಣ್ ಕುಮಾರ್ ಪುತ್ತಿಲ



ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ, ದೌರ್ಜನ್ಯ ಎಸಗಿದರೆ ಅದಕ್ಕೆ ತಕ್ಕ ಉತ್ತರವನ್ನು ಹಿಂದೂ ಸಮಾಜ ಕೊಡುತ್ತದೆ ಎಂದು ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಸುಳ್ಯ ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜೂ.4ರಂದು ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಬಳಿಕ ಸಭೆಯಲ್ಲಿ ಅವರು ಮಾತನಾಡಿದರು.

ಈ ರಾಷ್ಟ್ರ ಹಿಂದೂ ರಾಷ್ಟ್ರ ಆಗಬೇಕು. ಸರ್ವಾಧಿಕಾರಿ ಧೋರಣೆಯನ್ನು ಕಡೆಗಣಿಸಬೇಕು. ಅಧಿಕಾರ ಬಂದಂತಹ ಸಂದರ್ಭದಲ್ಲಿ ಯಾವುದನ್ನು ಬೇಕಾದರೂ ಮಾಡಬಹುದು ಎಂಬುದು ತಪ್ಪು. ಖಾಕಿ ವ್ಯವಸ್ಥೆಯ ಅಡಿಯಲ್ಲಿ ದೌರ್ಜನ್ಯ ಎಸಗಬೇಡಿ. ಧಾರ್ಮಿಕ ವ್ಯವಸ್ಥೆ ಮತ್ತು ರಾಷ್ಟ್ರೀಯ ವಿಚಾರಧಾರೆಯಲ್ಲಿ ಕೆಲಸ ಮಾಡುವ ಹಿಂದೂ ಸಮಾಜದ ಕಾರ್ಯಕರ್ತರು ಬೀದಿ ಹೆಣವಾಗುತ್ತಿದ್ದಾರೆ. ಇಡೀ ಜಗತ್ತಿಗೆ ಹಿಂದೂ ಸಮಾಜದ ಶಕ್ತಿಯನ್ನು ತೋರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇವತ್ತು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಹಿಂದುತ್ವ ಹಾಗೂ ಕೇಸರಿಗಾಗಿ ಪ್ರಾಣ ತ್ಯಾಗಕ್ಕೂ ನಾನು ಸಿದ್ದನಿದ್ದೇನೆ ಎಂದು ಪುತ್ತಿಲ ಹೇಳಿದರು.

ಸಂಘಕ್ಕಾಗಿ, ರಾಷ್ಟ್ರಕ್ಕಾಗಿ, ಹಲವಾರು ಕಾರ್ಯಕರ್ತರ ಬಲಿದಾನವಾಗಿದೆ. ಶಾಸಕರಾಗಿ ಜನಪ್ರತಿನಿಧಿಯಾಗಿ ಇದರ ಗೌರವ ನನಗೆ ಕಾರ್ಯಕರ್ತರು ಇಂದು ತೋರಿಸಿಕೊಟ್ಟಿದ್ದಾರೆ. ಸತ್ಯನಾರಾಯಣ ಪೂಜೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಪುತ್ತಿಲ ಹೇಳಿದರು.

ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಹಾಗೂ ಸುಳ್ಯದ ಭಗವಾನ್ ಕನ್‌ಸ್ಟ್ರಕ್ಷನ್ ಮಾಲಕರಾದ ಗೋಪಾಲಕೃಷ್ಣ ಬೋರ್ಕರ್ ಅವರು ಅಧ್ಯಕ್ಷತೆ ವಹಿಸಿದ್ದರು.






Leave a Reply

Your email address will not be published. Required fields are marked *

error: Content is protected !!