ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಫೈನಲ್: ವಿನೇಶಾ ಫೋಗಟ್ ಅನರ್ಹ
ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪಿರುವ ಭಾರತದ ವಿನೇಶಾ ಫೋಗಟ್ ಅವರನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿದೆ.

ಫೈನಲ್ ಇಂದು ನಡೆಯಲಿರುವುದರಿಂದ ಬೆಳಿಗ್ಗೆ ಅವರ ದೇಹ ತೂಕ ಪರೀಕ್ಷಿಸುವ ಸಂದರ್ಭ 50 ಕೆಜಿಗಿಂತ 100 ಗ್ರಾಂ ತೂಕ ಹೆಚ್ಚಿದ್ದಾರೆಂಬುದು ತಿಳಿದು ಬಂದಿದ್ದು, ಅವರು ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದಾರೆ. ಅವರ ತೂಕದಲ್ಲಿ 100 ಗ್ರಾಂವರೆಗೆ ಹೆಚ್ಚಳವಾಗಿದೆ ಎನ್ನಲಾಗಿದೆ. ಇದರಿಂದಾಗಿ ವಿನೇಶಾ ಫೋಗಟ್ ಭಾರೀ ನಿರಾಸೆ ಅನುಭವಿಸಿದ್ದಾರೆ.