ಮತ್ತೆ ಇಸ್ರೇಲ್ ದಾಳಿ: ಮಹಿಳೆಯರು, ಮಕ್ಕಳು ಸೇರಿದಂತೆ 19 ಪ್ಯಾಲೆಸ್ತೀನಿಯರು ಮೃತ್ಯು
ದಕ್ಷಿಣ ಗಾಜಾ ಪಟ್ಟಿಯಾದ್ಯಂತ ಭಾನುವಾರ ರಾತ್ರಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಹಿರಿಯ ಹಮಾಸ್ ರಾಜಕೀಯ ನಾಯಕ ಸೇರಿದಂತೆ ಕನಿಷ್ಠ 19 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಗಾಜಾ ನಗರದಲ್ಲಿ ನಿವಾಸಿಗಳನ್ನು ಸ್ಥಳಾಂತರಿಸುವ ಆದೇಶ ನೀಡಲಾಗಿದೆ. ಕಟ್ಟಡವನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಸೈನ್ಯದ ದಾಳಿ ನಡೆಸಿದೆ. ಇಸ್ರೇಲಿ ಬಾಂಬ್‌ಗಳು ಬೀಳುತ್ತಿದ್ದಂತೆ, ಗಾಯಗೊಂಡ ಮಕ್ಕಳನ್ನು ಗಾಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣ ಗಾಜಾದಲ್ಲಿರುವ ಯುರೋಪಿಯನ್ ಮತ್ತು ಕುವೈತ್ ಆಸ್ಪತ್ರೆಗಳಲ್ಲಿ 17 ಶವಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿವೆ. ಮೃತಪಟ್ಟವರಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ.