ಪುತ್ತೂರಿನ ಪ್ರಸಿದ್ಧ ಮೊಬೈಲ್ ಮಳಿಗೆ’ಸಲಾಲ ಮೊಬೈಲ್ಸ್’ ಸ್ಥಳಾಂತರಗೊಂಡು ಶುಭಾರಂಭ
ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ಪುತ್ತೂರು ಮುಖ್ಯ ರಸ್ತೆಯ ಕಲ್ಲಾರೆ ಜೆ.ಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸಲಾಲ ಮೊಬೈಲ್ಸ್ ಸ್ಥಳಾಂತರಗೊಂಡು ಕಲ್ಲಾರೆ ಕೃಷ್ಣ ಲಂಚ್ ಹೋಮ್ ಎದುರುಗಡೆ ಕಟ್ಟಡದಲ್ಲಿ ಆ.5ರಂದು ಶುಭಾರಂಭಗೊಂಡಿತು.
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಉದ್ಘಾಟಿಸಿದರು. ಮಾರ್ಕ್ ಟೆಲಿಕಾಂನ ಶಶಿರಾಜ್, ಪದ್ಮಶ್ರೀ ಮೆಡಿಕಲ್ಸ್ ನ ತಾರಾನಾಥ ಮತ್ತಿತರ ಹಲವರು ಆಗಮಿಸಿ ಶುಭ ಹಾರೈಸಿದರು.