ಟಿ20 ವಿಶ್ವಕಪ್: ಕೆನಡಾವನ್ನು ಸೋಲಿಸಿದ ಯುಎಸ್ಎ
ಐಸಿಸಿ ಟಿ20 ವಿಶ್ವಕಪ್ 2024 ಪಂದ್ಯಾಕೂಟ ಆರಂಭಗೊಂಡಿದ್ದು ಮೊದಲ ಪಂದ್ಯದಲ್ಲಿ ಆತಿಥೇಯ ಯುಎಸ್ಎ ತಂಡ ಕೆನಡಾ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಯುಎಸ್ ತಂಡವು ಏಳು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಡಲ್ಲಾಸ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ ಐದು ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದರೆ, ಯುಎಸ್ 17.4 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿ ಜಯ ಸಾಧಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕೆನಡಾ ಉತ್ತಮ ರನ್ ಕಲೆ ಹಾಕಿತು. ಆರಂಭಿಕ ಆಟಗಾರ ನವನೀತ್ ಧಲಿವಾಲ್ 61 ರನ್ ಗಳಿಸಿದರೆ, ನಿಕೋಲಸ್ ಕಿರ್ಟನ್ 51 ರನ್ ಮಾಡಿದರು. ವಿಕೆಟ್ ಕೀಪರ್ ಬ್ಯಾಟರ್ ಶ್ರೇಯಸ್ ಮೊವ್ವ 16 ಎಸೆತಗಳಲ್ಲಿ ಅಜೇಯ 32 ರನ್ ಬಾರಿಸಿದರು. ಯುಎಸ್ ಪರ ಆಲಿ ಖಾನ್, ಹರ್ಮೀತ್ ಸಿಂಗ್ ಮತ್ತು ಕೋರಿ ಆ್ಯಂಡರ್ಸನ್ ತಲಾ ಒಂದು ವಿಕೆಟ್ ಪಡೆದರು.