ಪುತ್ತೂರು: ವ್ಯಕ್ತಿಗೆ ಹಲ್ಲೆ- ಪ್ರಕರಣ ದಾಖಲು
ಪುತ್ತೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಾ.25ರಂದು ಕೂಲಿ ಕಾರ್ಮಿಕರ ನಡುವೆ ಹಲ್ಲೆ ನಡೆದಿದ್ದು ಪ್ರಕರಣದಲ್ಲಿ ಗಾಯಾಳು ನೀಡಿರುವ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾಂ ಜಿಲ್ಲೆಯ ಮಲ್ಲಪುರ ಗೋಕಾಕ್ ನಿವಾಸಿ ಕೂಲಿ ಕಾರ್ಮಿಕ ಆನಂದ ಬಾಂದಾವಿ(35 ವ)ರವರು ಚೂರಿ ಇರಿತಕ್ಕೊಳಗಾದವರು. ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ಪುತ್ತೂರು ಕೆ.ಎಸ್. ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಪರಿಚಯದ ಅವಿನಾಶ್, ನಾರಾಯಣ, ದುರ್ಗೇಶ್ ಮತ್ತು ಹರೀಶ್ ಎಂಬವರೊಂದಿಗೆ ಕುಳಿತುಕೊಂಡು ಮಾತನಾಡುತ್ತಿದ್ದಾಗ, ಆರೋಪಿ ಅವಿನಾಶ್ ಏಕಾಏಕಿಯಾಗಿ ಆನಂದ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು ಆ ಬಳಿಕ ಚಾಕುವಿನಿಂದ ಆನಂದ್ ಅವರ ಹೊಟ್ಟೆಗೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಆನಂದ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.