ಕೆಟ್ಟು ನಿಂತ ಓಮ್ನಿ ಕಾರನ್ನು ದೂಡಿ ಸೈಡಿಗಿಡುವಲ್ಲಿ ಸಹಕರಿಸಿದ ಶಾಸಕ ರೈ
ಪುತ್ತೂರು: ರಸ್ತೆ ಮಧ್ಯೆ ಕೆಟ್ಟು ನಿಂತ ಓಮ್ನಿ ಕಾರನ್ನು ರಸ್ತೆ ಬದಿಗೆ ಕೊಂಡೊಯ್ದು ನಿಲ್ಲಿಸುವಲ್ಲಿ ಶಾಸಕರಾದ ಅಶೋಕ್ ರೈ ಸಹಕರಿಸಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಮಂಗಳೂರಿಗೆ ತೆರಳುವ ವೇಳೆ ಬಿ ಸಿ ರೋಡಿನಲ್ಲಿ ಓಮ್ನಿ ಕಾರೊಂದು ಕೆಟ್ಟು ರಸ್ತೆ ಮಧ್ಯೆ ಬಾಕಿಯಾಗಿತ್ತು. ಹಿಂದಿನಿಂದ ಬರುತ್ತಿದ್ದ ಶಾಸಕರು ತನ್ನ ಕಾರನ್ನು ನಿಲ್ಲಿಸಿ ಓಮ್ನಿಯನ್ನು ತಳ್ಳುವಲ್ಲಿ ಸಹಕರಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಮುರಳೀಧರ್ ರೈ ಮಟಂತಬೆಟ್ಟು, ಜಯಪ್ರಕಾಶ್ ಬದಿನಾರ್ ಇದ್ದರು.