ಸುಳ್ಯ : ಏಕಾಏಕಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಕೊನೆಯುಸಿರೆಳೆದ ಯುವಕ
ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ಒಳಗಾದ ಯುವಕ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಕೊನೆಯುಸಿರೆಳೆದ ಘಟನೆ ಫೆ.3 ರಂದು ಪಂಜದ ಕರಿಕ್ಕಳದಿಂದ ವರದಿಯಾಗಿದೆ.
ಐವತ್ತೊಕ್ಲು ಗ್ರಾಮದ ಪುರಿಯ ಮೋನಪ್ಪ ಗೌಡ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಗಳ ಪುತ್ರ ಗಿರೀಶ್ ಕುಮಾರ್ ಮೃತ ಯುವಕ.
ಅವರಿಗೆ ಮಧ್ಯಾಹ್ನ ವೇಳೆಗೆ ಮನೆಯಲ್ಲಿ ಒಮ್ಮಿಂದೊಮ್ಮೆಲೆ ಉಸಿರಾಟ ಸಮಸ್ಯೆ ಕಾಣಿಸಿ ಕೊಂಡು ಅನಾರೋಗ್ಯಕ್ಕೆ ಒಳಗಾದರು.ತಕ್ಷಣ ಅವರನ್ನುಮನೆಯವರು
ಪುತ್ತೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಾರಿನಲ್ಲಿ ಕೊಂಡೊಯ್ಯುದ್ದಿದ್ದು, ಆದರೆ ಅವರು ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಅವರಿಗೆ 33 ವರುಷ ವಯಸ್ಸಾಗಿತ್ತು.ಮೃತರು ಅವಿವಾಹಿತರಾಗಿದ್ದು ತಂದೆ,ತಾಯಿ, ಸಹೋದರಾದ ಕುಸುಮಾಧರ, ಸಂಪತ್, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.