ಕರಾವಳಿ

ಅತಿಥಿ ಶಿಕ್ಷಕರ ಬಾಕಿ ವೇತನ ಶೀಘ್ರ ಬಿಡುಗಡೆಗೊಳಿಸಿ: ಎಂ.ಎ ರಫೀಕ್ ಸವಣೂರು ಆಗ್ರಹ



ಅತಿಥಿ ಶಿಕ್ಷಕರ ಬಾಕಿ ವೇತನ ಕೂಡಲೇ ಬಿಡುಗಡೆಗೊಳಿಸಿ ಆದೇಶ ಹೊರಡಿಸಬೇಕೆಂದು ಮೊಗರು ಶಾಲಾ SDMC ಅಧ್ಯಕ್ಷ ಹಾಗೂ ಸವಣೂರು ಗ್ರಾ.ಪಂ ಸದಸ್ಯ ರಫೀಕ್ ಎಂ ಎ ರವರು ಆಗ್ರಹಿಸಿದ್ದಾರೆ.

ಎಂ ಎ ರಫೀಕ್


ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ಹಲವಾರು ಅತಿಥಿ ಶಿಕ್ಷಕರಿಗೆ ವೇತನ ಬಾರದೆ ದಿನದೂಡುವುದೆ ಕಷ್ಟ ಸಾಧ್ಯವಾಗಿದೆ. ಸರ್ಕಾರ ಅತಿಥಿ ಶಿಕ್ಷಕರನ್ನು ಗುಲಾಮರಂತೆ ನೋಡುವುದನ್ನು ಬಿಟ್ಟು ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.


ಪ್ರತಿವರ್ಷ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಾಗ ಸೇವಾ ಹಿರಿತನ ಪರಿಗಣಿಸಿ ಮೊದಲ ಆದ್ಯತೆ ನೀಡಬೇಕು ಮತ್ತು ಮೆರಿಟ್ ಪದ್ದತಿ ತೆಗೆದು ಹಾಕಬೇಕು. ಸರ್ಕಾರಿ ಶಿಕ್ಷಕರಂತೆ ಮಧ್ಯಂತರ ರಜೆ ಮತ್ತು ಬೇಸಿಗೆ ರಜೆಯಲ್ಲಿಯೂ ವೇತನ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಲು ದೆಹಲಿ ಹರಿಯಾಣ ಪಂಜಾಬ್ ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿದೆ. ಕರ್ನಾಟಕ ಸರ್ಕಾರವೂ ಇದೇ ಕ್ರಮ ಅನುಸರಿಸಬೇಕು. ಆಯಾ ಶಾಲೆಗಳಲ್ಲಿ ಸೇವಾ ದೃಢೀಕರಣ ಪತ್ರವನ್ನು ನೀಡಬೇಕು. ಪ್ರತೀ ತಿಂಗಳು ಅತಿಥಿ ಶಿಕ್ಷಕರ ಖಾತೆಗೆ ಸರಿಯಾಗಿ ವೇತನ ಪಾವತಿಸಬೇಕು. ಖಾಯಂ ಶಿಕ್ಷಕರಂತೆ ಅತಿಥಿ ಶಿಕ್ಷಕರಿಗೂ ಸಮಾನ ಸ್ಥಾನಮಾನ ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!