ಕರಾವಳಿ

ಇಳಂತಿಳ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶೆಷ ಸಂವಾದ ಕಾರ್ಯಕ್ರಮ



ಉಪ್ಪಿನಂಗಡಿ: ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಇಳಂತಿಳ ವಿದ್ಯಾನಗರ ಇಲ್ಲಿ ವಿದ್ಯಾರ್ಥಿಗಳು ಪೊಷಕರು ಮತ್ತು ಶಿಕ್ಷಕರ ವಿಶೆಷ ಸಂವಾದ ಕಾರ್ಯಕ್ರಮ ನಡೆಯಿತು.

SSLC ಪರೀಕ್ಷೆ ಯಲ್ಲಿ ಉತ್ತಮ ಸಾಧನೆ ಮಾಡಲು ಮಕ್ಕಳು ಪೋಷಕರು ಮತ್ತು ಶಿಕ್ಷಕರ ನಡುವೆ ಮಕ್ಕಳ ಪ್ರಗತಿ ಮತ್ತು SSLC ಪರೀಕ್ಷೆಗೆ ಪ್ರೇರಕವಾಗಿ ವಿವಿಧ ವಿಷಯ ಯೋಜನೆಗಳನ್ನು ಚರ್ಚಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಇಕ್ಬಾಲ್ ಮಾತನಾಡಿ  ನೆನಪು ಶಕ್ತಿ ಹೆಚ್ಚಿಸುವುದು ಮತ್ತು ಮಕ್ಕಳನ್ನು ಕೆಟ್ಟ ಚಟಗಳಿಂದ ದೂರ ಇಟ್ಟು ಕಲಿಕಾ ವಾತಾವರಣ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಫೊಷಕರಿಗೆ ಶಿಕ್ಷಕರಿಗೆ ವಿನಂತಿಸಿದರು. ಶಾಲಾ ಅಧ್ಯಕ್ಷ ಮತ್ತು ಸಂಚಾಲಕರಾದ ರವೂಫ್ ಮಾತನಾಡಿ ಮಕ್ಕಳು ನಮ್ಮ ಭವಿಷ್ಯದ ನಾಯಕರು, ಅವರಿಗೆ ಉತ್ತಮ ಶಿಕ್ಷಣ ಅಗತ್ಯ ಅದಕ್ಕಾಗಿ ಈ ರೀತಿಯ ಸಂವಾದ ಅಗತ್ಯ ಎಂದರು.

ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಹೇಂತಾರ್ ಮಾತನಾಡಿ ಪೋಷಕರ ಮತ್ತು ವಿದ್ಯಾರ್ಥಿಗಳ ಕರ್ತವ್ಯಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಅರುಣಾ, ತಾಹಿರ, ನೇತ್ರ ಉಷಾ ಮತ್ತು ಸುಚಿತ್ರಾ ಭಾಗವಹಿಸದರು.

Leave a Reply

Your email address will not be published. Required fields are marked *

error: Content is protected !!