ಕರಾವಳಿ

ಕರಾವಳಿರಾಜಕೀಯ

ರಾಜ್ಯದಲ್ಲೂ, ಪುತ್ತೂರಿನಲ್ಲೂ ಕಾಂಗ್ರೆಸ್ ಗೆಲ್ಲಿಸಲು ಈಗಲೇ ಸಿದ್ಧರಾಗಬೇಕು- ಕಾರ್ಯಕರ್ತರಿಗೆ ಶಕುಂತಳಾ ಶೆಟ್ಟಿ ಕರೆ

ಪುತ್ತೂರು: ತಳಮಟ್ಟದಲ್ಲೇ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಮೂಲಕ ರಾಜ್ಯದಲ್ಲಿ, ಹಾಗೂ ಪುತ್ತೂರಿನಲ್ಲಿ ಪಕ್ಷ ಗೆದ್ದು ಬರುವಂತೆ ಮಾಡಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಅ.೩೦ರಂದು ಕಲ್ಪಣೆ ಸಮುದಾಯ ಭವನದಲ್ಲಿ ನಡೆದ ಸರ್ವೆ ವಲಯ ಕಾಂಗ್ರೆಸ್ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ತಳಮಟ್ಟದಲ್ಲೇ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಬಿಜೆಪಿಯ ದುರಾಡಳಿತವನ್ನು ಜನತೆಗೆ ತಿಳಿಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲುವ ಪ್ರಯತ್ನವನ್ನು ನಾವೆಲ್ಲಾ ಮಾಡಬೇಕು. ಅದಕ್ಕಾಗಿ ಈಗಿಂದೀಗಲೇ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಕುಂತಳಾ ಶೆಟ್ಟಿ ಕಾರ್ಯಕರ್ತರಿಗೆ ಕಿವಿಮಾತು  ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಬಿ.ವಿಶ್ವನಾಥ ರೈ ಮಾತನಾಡಿ ಪುತ್ತೂರಿನಲ್ಲಿ ನಮ್ಮ ಪಕ್ಷದ ಶಾಸಕರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದರು. ವಲಯಾಧ್ಯಕ್ಷ ಎಸ್.ಡಿ ವಸಂತ ಅವರ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಮಚಂದ್ರ ಸೊರಕೆ ಪ್ರಸ್ತಾವನೆಗೈದರು. ಕೆಪಿಸಿಸಿ ವಕ್ತಾರರಾದ ಅಮಳ ರಾಮಚಂದ್ರ ಭಟ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಎಸ್.ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ವಲಯ ಉಸ್ತುವಾರಿ ಯಾಕೂಬ್ ಮುಲಾರ್ ಬೂತ್ ಅಧ್ಯಕ್ಷರಾದ ಯತೀಶ್ ರೈ, ಮಜೀದ್ ಬಾಳಾಯ, ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಮರಿಯ, ಮುಂಡೂರು ಗ್ರಾ.ಪಂ ಸದಸ್ಯರಾದ ಕಮಲೇಶ್ ಎಸ್.ವಿ, ವಿಜಯ ಕರ್ಮಿನಡ್ಕ, ಕಮಲ ನೇರೋಳ್ತಡ್ಕ, ಮಾಜಿ ತಾ.ಪಂ ಸದಸ್ಯೆ ಸುಮತಿ ಹಾಗೂ ಕಾಂಗ್ರೆಸ್ ಸ್ಥಳೀಯ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿದರು. ಮಜೀದ್ ಬಾಳಾಯ ವಂದಿಸಿದರು.  

Read More
ಕರಾವಳಿರಾಜ್ಯ

2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಡಾ. ರವಿ ಶೆಟ್ಟಿ ಮೂಡಂಬೈಲು ಆಯ್ಕೆ

ಪುತ್ತೂರು: 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು ಪುತ್ತೂರು ತಾಲೂಕಿನ ಡಾ. ರವಿ ಶೆಟ್ಟಿ ಮೂಡಂಬೈಲು ಆಯ್ಕೆಯಾಗಿದ್ದಾರೆ. ಡಾ.ರವಿ ಶೆಟ್ಟಿ ಅವರ ಸಮಾಜ ಸೇವೆ ಆಧರಿಸಿ ಈ

Read More
ಕರಾವಳಿಕ್ರೈಂ

ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆ ಮರೆಸಿ ಕೊಂಡಿದ್ದ ಆರೋಪಿ ಬಂಧನ

ಪುತ್ತೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆ ಮರೆಸಿ ಕೊಂಡಿದ್ದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ

Read More
ಕರಾವಳಿ

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್’ನ ಕಾನೂನು ಸಲಹೆಗಾರರಾಗಿ ಸುಳ್ಯದ ಅಡ್ವಕೇಟ್ ಅಬೂಬಕರ್ ಅಡ್ಕಾರ್ ನೇಮಕ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಇದರ ಕಾನೂನು ಸಲಹೆಗಾರರಾಗಿ ಸುಳ್ಯದ ನ್ಯಾಯವಾದಿ ಹಾಗೂ ನೋಟರಿ ಅಬೂಬಕ್ಕರ್ ಅಡ್ಕಾರ್ ರವರನ್ನು ಜಿಲ್ಲಾ ಸಹಕಾರಿ ಸಂಘದ

Read More
ಕರಾವಳಿ

ವಿಟ್ಲ: ಕಳ್ಳತನ ಪ್ರಕರಣದ ಖತರ್ನಾಕ್ ಖದೀಮ ಅರೆಸ್ಟ್

ವಿಟ್ಲ: ಬಂಟ್ವಾಳ ತಾಲೂಕು ಇಡಿದು ಗ್ರಾಮದ ಮಿತ್ತೂರು ಎಂಬಲ್ಲಿ ಮನೆಯಲ್ಲಿ ಮಲಗಿದ್ದ ವೇಳೆ 107 ಗ್ರಾಂ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಖತರ್ನಾಕ್ ಖದೀಮನನ್ನು

Read More
ಕರಾವಳಿ

ನವೆಂಬರ್ 4: ಮಾಡನ್ನೂರಿನಲ್ಲಿ ‘ಮಜ್ಲಿಸುನ್ನೂರ್’ ಬೃಹತ್ ಆಧ್ಯಾತ್ಮಿಕ ಸಂಗಮ

ಪುತ್ತೂರು: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಶಹೀದಿಯ್ಯ ನಗರ ಮಾಡನ್ನೂರು ಇದರ ಆಶ್ರಯದಲ್ಲಿಬೃಹತ್ ಆಧ್ಯಾತ್ಮಿಕ ಮಹಾಸಂಗಮಮಜ್ಲಿಸುನ್ನೂರ್ ನವೆಂಬರ್ 4ರಂದು ಮಗ್ರಿಬ್ ನಮಾಜಿನ ಬಳಿಕ ಮಾಡನ್ನೂರು ಶಹೀದಿಯ್ಯ ನಗರ

Read More
ಕರಾವಳಿ

SSLC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂ lರು: 2022-23ನೇ ಸಾಲಿನ SSLC ಪರೀಕ್ಷೆಯತಾತ್ಕಾಲಿಕ ವೇಳಾಪಟ್ಟಿಯನ್ನ ಕರ್ನಾಟಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಏಪ್ರಿಲ್ 1 ರಿಂದ ಏಪ್ರಿಲ್ 15ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ

Read More
ಕರಾವಳಿ

ಕಡಬ: ಬಿಳಿನೆಲೆಯಲ್ಲಿ ಕಾರು- ಜೀಪು ಡಿಕ್ಕಿ: ನಾಲ್ವರಿಗೆ ಗಂಭೀರ ಗಾಯ

ಕಡಬ: ಕಾರು ಹಾಗೂ ಜೀಪ್ ನಡುವೆ ಢಿಕ್ಕಿ ಸಂಭವಿಸಿ ನಾಲ್ವರು ಗಂಭೀರ ಗಾಯಗೊಂಡ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ

Read More
ಕರಾವಳಿ

ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ಮೃತಪಟ್ಟ ಅಬ್ದುಲ್ ಖಾದರ್ ಮನೆಗೆ ಮುಸ್ಲಿಂ ಯುವಜನ ಪರಿಷತ್ ನಿಯೋಗ ಭೇಟಿ -ಸಾಂತ್ವನ

ಪುತ್ತೂರು: ಕಾಣಿಯೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲೆ ನಡೆದ ದೌರ್ಜನ್ಯದ ವಿರುದ್ಧದ,ಪುತ್ತೂರಿನಲ್ಲಿ ಮುಸ್ಲಿಂ ಯುವಜನ ಪರಿಷತ್ ವತಿಯಿಂದ ನಡೆದ, ಖಂಡನಾ ಸಭೆಗೆ ಆಗಮಿಸಿ ಹಿಂತಿರುಗಿದಿದ್ದ ವೇಳೆ ದ್ವಿಚಕ್ರ ವಾಹನ

Read More
ಕರಾವಳಿಕ್ರೈಂ

ಸುಳ್ಯ: ಹತ್ತು ದಿನದ ಮಗುವನ್ನು ಬಾವಿಗೆ ಎಸೆದು ಕೊಂದ ತಾಯಿ

ಸುಳ್ಯ:ಪಂಜ ಸಮೀಪದ ಕೂತ್ಕುಂಜ ಗ್ರಾಮದಬಸ್ತಿಕಾಡು ಎಂಬಲ್ಲಿ ಹೆತ್ತ ತಾಯಿಯೇ ತನ್ನ ಕರುಳಿನ ಕುಡಿ ಹತ್ತು ದಿನದ ಮಗುವನ್ನು ಬಾವಿಗೆ ಎಸೆದು ಕೊಂದು ಹಾಕಿದ ಹೃದಯ ವಿದ್ರಾಯಕ ಘಟನೆ

Read More
error: Content is protected !!