ಕರಾವಳಿ

ನವೆಂಬರ್ 4: ಮಾಡನ್ನೂರಿನಲ್ಲಿ ‘ಮಜ್ಲಿಸುನ್ನೂರ್’ ಬೃಹತ್ ಆಧ್ಯಾತ್ಮಿಕ ಸಂಗಮ



ಪುತ್ತೂರು: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಶಹೀದಿಯ್ಯ ನಗರ ಮಾಡನ್ನೂರು ಇದರ ಆಶ್ರಯದಲ್ಲಿ
ಬೃಹತ್ ಆಧ್ಯಾತ್ಮಿಕ ಮಹಾಸಂಗಮ
ಮಜ್ಲಿಸುನ್ನೂರ್ ನವೆಂಬರ್ 4ರಂದು ಮಗ್ರಿಬ್ ನಮಾಜಿನ ಬಳಿಕ ಮಾಡನ್ನೂರು ಶಹೀದಿಯ್ಯ ನಗರ ದಲ್ಲಿ ನಡೆಯಲಿದೆ.


ಸೈಯ್ಯಿದ್ ಬುರ್ಹಾನ್ ಅಲೀ ತಂಗಳ್ ಅಲ್ ಬುಖಾರಿ ನೇತೃತ್ವದಲ್ಲಿ ಮಖಾಂ ಝಿಯಾರತ್ ನಡೆಯಲಿದೆ.
ನೂರುಲ್ ಹುದಾದ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸೂಫಿವರ್ಯರಾದ ಶೈಖುನಾ ಪಾತೂರ್ ಉಸ್ತಾದ್ ದುವಾ ನೇತೃತ್ವ ವಹಿಸಲಿದ್ದು
ಸಮಸ್ತ ಕೇಂದ್ರ ಮುಶಾವರ ಸದಸ್ಯರು ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಉದ್ಘಾಟಿಸಲಿದ್ದಾರೆ.
ನೂರುಲ್ ಹುದಾದ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ
ಪ್ರಾಸ್ತಾವಿಕ ಭಾಷಣ ನಡೆಸಲಿದ್ದು ಖ್ಯಾತ ಪ್ರಭಾಷಣಗಾರ ಕೀಚೇರಿ ಅಬ್ದುಲ್ ಗಫೂರ್ ಮೌಲವಿ
ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.


ಕಾರ್ಯಕ್ರಮದಲ್ಲಿ ನೂರುಲ್ ಹುದಾ ವಿದ್ಯಾರ್ಥಿಗಳಿಂದ ಬೃಹತ್ ಮೆಹ್ಫಿಲ್ ಈ ಇಷ್ಕ್ ನಡೆಯಲಿದೆ.
ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವ ಕಾಶ ವ್ಯವಸ್ಥೆಯಿದ್ದು
ಕೊನೆಯಲ್ಲಿ ಅನ್ನದಾನ ನಡೆಯಲಿದೆ

Leave a Reply

Your email address will not be published. Required fields are marked *

error: Content is protected !!