ಕರಾವಳಿರಾಜ್ಯ

2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಡಾ. ರವಿ ಶೆಟ್ಟಿ ಮೂಡಂಬೈಲು ಆಯ್ಕೆ

ಪುತ್ತೂರು: 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು ಪುತ್ತೂರು ತಾಲೂಕಿನ ಡಾ. ರವಿ ಶೆಟ್ಟಿ ಮೂಡಂಬೈಲು ಆಯ್ಕೆಯಾಗಿದ್ದಾರೆ.

ಡಾ.ರವಿ ಶೆಟ್ಟಿ ಅವರ ಸಮಾಜ ಸೇವೆ ಆಧರಿಸಿ ಈ ಪ್ರಶಸ್ತಿ ಒಲಿದು ಬಂದಿದ್ದು ನ.1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಸ್ತುತ ಕತಾರ್’ನಲ್ಲಿ ಉದ್ಯಮಿಯಾಗಿರುವ ಡಾ.ರವಿ ಶೆಟ್ಟಿ ಅವರ ಸಮಾಜ ಸೇವೆಗಾಗಿ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.
ಹತ್ತಾರು ಸಂಘ ಸಂಸ್ಥೆಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!