ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್’ನ ಕಾನೂನು ಸಲಹೆಗಾರರಾಗಿ ಸುಳ್ಯದ ಅಡ್ವಕೇಟ್ ಅಬೂಬಕರ್ ಅಡ್ಕಾರ್ ನೇಮಕ
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಇದರ ಕಾನೂನು ಸಲಹೆಗಾರರಾಗಿ ಸುಳ್ಯದ ನ್ಯಾಯವಾದಿ ಹಾಗೂ ನೋಟರಿ ಅಬೂಬಕ್ಕರ್ ಅಡ್ಕಾರ್ ರವರನ್ನು ಜಿಲ್ಲಾ ಸಹಕಾರಿ ಸಂಘದ ಆಡಳಿತ ಮಂಡಳಿ ನೇಮಕ ಮಾಡಿದೆ.
ಇವರು ಸುಳ್ಯ ತಾಲೂಕು ಅಡ್ಕಾರು ಗ್ರಾಮದ ನಿವಾಸಿ ಜಿಎನ್ ಮಹಮ್ಮದ್ ಮತ್ತು ಆಸಿಯ ದಂಪತಿಗಳ ಪುತ್ರರಾಗಿದ್ದಾರೆ. ಅಬೂಬಕ್ಕರ್ ರವರು ಕಳೆದ 20 ವರ್ಷದಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಪಸಂಖ್ಯಾತ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಾರಂಭದಿಂದಲೇ 20 ವರ್ಷಗಳಿಂದ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೋಆಪರೇಟಿವ್ ಸೊಸೈಟಿಗಳ ಗೌರವ ಮಧ್ಯಸ್ಥಿಗೆದಾರರಾಗಿ, ಕಾನೂನು ಸೇವೆಗಳ ಸಮಿತಿಯಿಂದ ಪ್ಯಾನಲ್ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕೇಂದ್ರ ಸರಕಾರದಿಂದ ಜಿಲ್ಲಾ ನೋಟರಿಯಾಗಿಯೂ ಸುಳ್ಯದಲ್ಲಿ ಕಚೇರಿಯನ್ನು ಹೊಂದಿರುತ್ತಾರೆ.
ರಾಜಕೀಯ ಧಾರ್ಮಿಕ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ಸುಳ್ಯ ತಾಲೂಕು ವಕೀಲರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.