ಕರಾವಳಿ

ಕರಾವಳಿಕ್ರೈಂಜಿಲ್ಲೆ

ಆಸ್ತಿ ವಿವಾದದಲ್ಲಿ ಸಂಪ್ಯದ ಉಸ್ಮಾನ್ ಕೊಲೆ ಪ್ರಕರಣ: ಆರೋಪಿ ಸಹೋದರರು ಪೊಲೀಸ್ ಕಸ್ಟಡಿಗೆ

ಸುಳ್ಯ: ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಸಹೋದರರಿಂದ ಕೊಲೆಯಾದ ಸಂಪ್ಯದ ಉಸ್ಮಾನ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರೋಪಿ ಸಹೋದರರನ್ನು ಘಟನಾ ಸ್ಥಳಕ್ಕೆ ಕೊಂಡೊಯ್ದು

Read More
ಕರಾವಳಿ

ನವ ತಲೆಮಾರಿಗೆ ಧಾರ್ಮಿಕ ಜ್ಞಾನ ಧಾರೆಯೆರೆದು ಅವರನ್ನು ಸುಸಂಸ್ಕೃತ ಪ್ರಜೆಗಳಾಗಿ ರೂಪಿಸುವಲ್ಲಿ ಮದ್ರಸ ಅಧ್ಯಾಪಕರ ಸೇವೆ ಮಹತ್ತರ-ಸಿರಾಜುದ್ದೀನ್ ಫೈಝಿ

ಪುತ್ತೂರು: ನವ ತಲೆಮಾರಿಗೆ ಧಾರ್ಮಿಕ ಜ್ಞಾನವನ್ನು ಧಾರೆಯೆರೆದು ಅವರನ್ನು ಸುಸಂಸ್ಕೃತ ಪ್ರಜೆಗಳಾಗಿ ರೂಪಿಸುವಲ್ಲಿ ಮದ್ರಸ ಅಧ್ಯಾಪಕರ ಸೇವೆಯು ಮಹತ್ತರವಾಗಿದೆಯೆಂದು ಬಪ್ಪಳಿಗೆ ಮಸೀದಿಯ ಖತೀಬರಾದ ಸಿರಾಜುದ್ದೀನ್ ಫೈಝಿ ನುಡಿದರು.

Read More
ಕರಾವಳಿಕ್ರೈಂ

ಸುಳ್ಯ: ಮನೆಯ ಬಾಗಿಲು ಮುರಿದು ಕಳ್ಳತನ: ಅಪಾರ ಚಿನ್ನಾಭರಣ ದೋಚಿದ ಕಳ್ಳರು

ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವುಗೈದಿರುವ ಘಟನೆ ಸುಳ್ಯ ತಾಲೂಕು ಕನಕಮಜಲು ಗ್ರಾಮದ ಸುಣ್ಣಮೂಲೆಯ ಬುಡ್ಲೆಗುತ್ತುವಿನಲ್ಲಿ ಜು.16ರಂದು ರಾತ್ರಿ ಸಂಭವಿಸಿದೆ. ರಾತ್ರಿ ವೇಳೆ ಮನೆಯಲ್ಲಿ ಮನೆಯವರು ಇಲ್ಲದ

Read More
ಕರಾವಳಿಕ್ರೈಂ

ಬೆಳ್ತಂಗಡಿ: ಉಯ್ಯಾಲೆಯಲ್ಲಿ ಆಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕ ಮೃತ್ಯು

ಉಯ್ಯಾಲೆಯಲ್ಲಿ ಆಡುತ್ತಿದ್ದ ಬಾಲಕನೋರ್ವನ ಕುತ್ತಿಗೆಗೆ ಆಕಸ್ಮಿಕವಾಗಿ ಹಗ್ಗ ಬಿಗಿದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ

Read More
ಕರಾವಳಿ

ಮಂಗಳೂರು: ನಮ್ಮ ನಾಡ ಒಕ್ಕೂಟ, ಶಾಹೀನ್ ಬೀದರ್ ಸಂಸ್ಥೆಯಿಂದ CRDF ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯರವರಿಗೆ ಅಭಿನಂದನೆ

ನಮ್ಮ ನಾಡ ಒಕ್ಕೂಟ ಮತ್ತು ಶಾಹೀನ್ ಬೀದರ್ ಸಂಸ್ಥೆಯು ಜಂಟಿಯಾಗಿ ಮಂಗಳೂರಿನಲ್ಲಿ ಆಯೋಜಿಸಿರುವ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಮತ್ತು ಕೆರಿಯರ್ ಗೈಡೆನ್ಸ್ ಕಾರ್ಯಕ್ರಮದಲ್ಲಿ ಕಮ್ಯೂನಿಟಿ

Read More
ಕರಾವಳಿ

ಹೆಲ್ತ್ ಪ್ಲಸ್ ಮೆಡಿಕಲ್‌ನವರ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್‌ನಿಂದ ಮಾದರಿ ಕಾರ್ಯ

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಮಾಡುವವರ ಪೈಕಿ ತೀರಾ ಬಡವರಾಗಿದ್ದ 20 ಮಂದಿ ಡಯಾಲಿಸೀಸ್ ರೋಗಿಗಳಿಗೆ ಪ್ರತೀ ತಿಂಗಳು 1000/- ರೂಪಾಯಿಯ ಔಷಧಿ ಮತ್ತು ಡಯಾಲಿಸೀಸ್ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಸೇವಿಸಲು ತಿಂಗಳಿಗೆ  480/- ರೂಪಾಯಿಯ ಕೂಪನ್ ನೀಡುವ ಕಾರ್ಯಕ್ರಮವನ್ನು ಪುತೂರು ಬೊಳ್ವಾರಿನಲ್ಲಿರುವ ಹೆಲ್ತ್ ಪ್ಲಸ್ ಮೆಡಿಕಲ್‌ನವರ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ಮೂಲಕ ಪ್ರಾರಂಭಿಸಲಾಗಿದ್ದು ಜು.೧೫ರಂದು ಒಂದು ವರ್ಷದ ಉಚಿತ ಮೆಡಿಸಿನ್ ಕಾರ್ಡ್‌ನ್ನು ವಿತರಿಸಲಾಯಿತು. ಅನಿವಾಸಿ ಭಾರತೀಯ ಅಬ್ದುಲ್ ಸತ್ತಾರ್ ಮತ್ತು ತೌಸೀರ್ ಅಹಮದ್‌ರವರು ಇದಕ್ಕೆ ಸಹಕರಿಸಿದ್ದಾರೆ. ಹೆಲ್ತ್ ಪ್ಲಸ್ ಮೆಡಿಕಲ್ಸ್‌ನ ಪಾಲುದಾರರಾದ ಆಸಿಫ್ ಮತ್ತು ಅಕ್ಬರ್‌ರವರು ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ರಿಯಾಯಿತಿಯಲ್ಲಿ ಔಷಧಿನೀಡುವ ಕುರಿತು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಜಯದೀಪ್ ಮಾತನಾಡಿ ಈಗಾಗಲೇ ರೋಟರಿ ಮೂಲಕ 6 ಡಯಾಲಿಸೀಸ್ ಮೆಶಿನ್ ಸರಕಾರಿ ಆಸ್ಪತ್ರೆಗೆ ಬಂದಿದ್ದು ಒಟ್ಟು 12 ಮೆಶಿನ್ ಕಾರ್ಯಚರಿಸುತ್ತಿದೆ. 94 ಜನ ರೋಗಿಗಳ ಪೈಕಿ ತೀರಾ ಬಡವರನ್ನ ಹುಡುಕಿ ಮಾಡುವ ಈ ಸೇವೆ ಅತೀ ಉತ್ತಮವಾದುದು ಆಗಿದೆ. ಸಂಘ ಸಂಸ್ತೆ ಮತ್ತು ಇನ್ನಿತರರಿಂದ ರೋಗಿಗಳಿಗೆ ಸಹಾಯ ಆದಾಗ ಅವರ ಕಷ್ಟ ತಕ್ಕ ಮಟ್ಟಿಗೆ ಪರಿಹಾರ ಆಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸರ್ಫುದ್ದೀನ್ ತಂಙಳ್ ಮಾತನಾಡಿ ರೋಗಿಗಳಿಗೆ ಸಹಾಯ ಮಾಡುವುದು ಪುಣ್ಯದ ಕಾರ್ಯವಾಗಿದ್ದು ಕಷ್ಟದಲ್ಲಿದ್ದಾಗ ಸಹಾಯ ಮಾಡುವವರಿಗೆ, ಇದಕ್ಕೆ ಸಹಾಯ ಮಾಡಿದವರಿಗೆ ದೇವರು ಪ್ರತಿಫಲ ಕೊಡುತ್ತಾನೆ ಎಂದು ಹೇಳಿದರು. ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ ಹೆಲ್ತ್ ಪ್ಲಸ್ ಮೆಡಿಕಲ್ ಮೂಲಕ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ನವರು ಕೊಡಮಾಡುವ ಈ ದಾನದಲ್ಲಿ ಸರ್ವ ದರ್ಮದವರು ಇದ್ದು ಇದು ಎಲ್ಲರ ಮನ ಗೆಲ್ಲುವ ಸಂಗತಿಯಾಗಿದೆ. ಸಮಾಜ ಸೇವೆಯಲ್ಲಿ ಅತೀ ಉತ್ತಮ ಸೇವೆ ಇದಾಗಿದ್ದು ಹೆಲ್ತ್ ಸೆಂಟರ್ ನವರ ಸೇವೆಯನ್ನು ಶ್ಲಾಘಿಸಿದರು ಕಾರ್ಯಕ್ರಮದಲ್ಲಿ 20 ಮಂದಿ ರೋಗಿಗಳಿಗೆ ಹೆಲ್ತ್ ಕಾರ್ಡ್ ನೀಡುವ ವ್ಯವಸ್ಥೆ ಮಾಡಿದ್ದು ಮುಂದಕ್ಕೆ ದಾನಿಗಳ ನೆರವಿನೊಂದಿಗೆ ಇನ್ನಷ್ಟು ರೋಗಿಗಳಿಗೆ ಸಹಾಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಪುತ್ತೂರು ಸರಕಾರಿ ಆಸ್ಪತ್ರೆಯ ಮಾಜಿ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ದರ್ಬೆ ತಿಳಿಸಿದರು.

Read More
ಕರಾವಳಿರಾಜಕೀಯ

ಆರ್ಯಾಪು, ನಿಡ್ಪಳ್ಳಿ ಗ್ರಾ.ಪಂ ತೆರವಾದ ಸ್ಥಾನಕ್ಕೆ ಚುನಾವಣೆ: ಕಾಂಗ್ರೆಸ್, ಬಿಜೆಪಿ, ಪುತ್ತಿಲ ಪರಿವಾರ ಬೆಂಬಲಿತ ಸದಸ್ಯರ ಮಧ್ಯೆ ತ್ರಿಕೋನ ಸ್ಪರ್ಧೆ

ಪುತ್ತೂರು: ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾ.ಪಂಗಳಲ್ಲಿ ಸದಸ್ಯರಿಬ್ಬರ ನಿಧನದಿಂದ ತೆರವಾದ ತಲಾ ಒಂದು ಸ್ಥಾನಕ್ಕೆ ಜು.23ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ

Read More
ಕರಾವಳಿರಾಜಕೀಯರಾಜ್ಯ

ಲೋಕಸಭಾ ಚುನಾವಣೆ: ಜೆಡಿಎಸ್ ಬೆಂಬಲ ಅಪೇಕ್ಷಿಸಿದ ಶೋಭಾ ಕರಂದ್ಲಾಜೆ

ರಾಜಕೀಯ ಭಿನ್ನಮತಗಳನ್ನ ದೂರವಿಟ್ಟು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ಸೂಚಿಸುವ ಬಗ್ಗೆ

Read More
ಕರಾವಳಿರಾಜಕೀಯ

ಬೆಳ್ತಂಗಡಿ ಕಾಂಗ್ರೆಸ್ ಸಭೆಯಲ್ಲಿ ಬಣಗಳ ಮಧ್ಯೆ ಮಾತಿನ ಚಕಮಕಿ: ಜಿಲ್ಲಾಧ್ಯಕ್ಷರ ಬದಲಾವಣೆಗೆ ಸಾಮಾಜಿಕ ಜಾಲ ತಾಣದಲ್ಲಿ ಆಗ್ರಹ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳ ಕುರಿತು ಪರಾಮರ್ಶೆ ಸಭೆ ಜು.14ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದ್ದು ಸಭೆಯಲ್ಲಿ ಎರಡು ಬಣಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ರಕ್ಷಿತ್ ಶಿವರಾಮ್ ಬಣ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ. ಸತ್ಯ ಶೋಧನಾ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಭೆ ನಡೆಸುತ್ತಿದ್ದ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಗೌಡ, ಶೈಲೇಶ್ ಕುಮಾರ್, ಕೇಶವ್ ಪಿ, ಹರೀಶ್ ಕುಮಾರ್, ಮ್ಯಾಥ್ಯೂ, ರಾಜಶೇಖರ್ ಮತ್ತಿತರರು ಸಭೆಯಲ್ಲಿದ್ದರು. ಈ ವೇಳೆ ಎರಡು ಬಣಗಳ ಮಧ್ಯೆ ಮಾತಿನ ಚಕಮಕಿ ನಡೆದು ಪರಸ್ಪರ ವಾಗ್ವಾದ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು.  ಸುಳ್ಯ ಹಾಗೂ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಗುಂಪುಗಾರಿಕೆ ಜೋರಾಗಿ ನಡೆಯುತ್ತಿದ್ದು ಸದ್ಯಕ್ಕೆ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಈತನ್ಮಧ್ಯೆ ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರನ್ನು ಬದಲಾಯಿಸಬೇಕೆಂದು ಸಾಮಾಜಿಕ ಜಾಲ ತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಭಿನ್ನಮತ ಶಮನಗೊಳಿಸುವಲ್ಲಿ ವಿಫಲವಾಗಿರುವ ಜಿಲ್ಲಾಧ್ಯಕ್ಷರು ಪಕ್ಷ ಸಂಘಟಿಸುವಲ್ಲಿ ವಿಫಲರಾಗಿದ್ದಾರೆ, ಅಲ್ಲದೇ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ, ಹಾಗಿರುವಾಗ ಜಿಲ್ಲಾಧ್ಯಕ್ಷರನ್ನು ಬದಲಾಯಿಸುವುದೇ ಸೂಕ್ತ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Read More
ಕರಾವಳಿ

ಸಹೋದರರಿಂದ ಕೊಲೆಯಾದ ಸಂಪ್ಯದ ಉಸ್ಮಾನ್: ಸಂಪ್ಯ ಮಸೀದಿ ಖಬರ್ ಸ್ಥಾನದಲ್ಲಿ ದಫನ ಕಾರ್ಯ

ಪುತ್ತೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಜು.14ರಂದು ಸಂಪಾಜೆ ಸಮೀಪದ ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಸಹೋರರಿಂದಲೇ ಕೊಲೆಯಾದ ಸಂಪ್ಯದ ಉಸ್ಮಾನ್ ಅವರ ಮೃತದೇಹ ಜು.14ರಂದು ರಾತ್ರಿ 10.30ರ ಅಂದಾಜು ಸಂಪ್ಯ ಮಸೀದಿ ತಲುಪಿದ್ದು ಆ ಬಳಿಕ ಧಾರ್ಮಿಕ ವಿಧಿವಿಧಾನ ಬಳಿಕ ಮೃತದೇಹವನ್ನು ಸಂಪ್ಯ ಮಸೀದಿಗೊಳಪಟ್ಟ ಜಾಗದಲ್ಲಿ ದಫನ ಮಾಡಲಾಯಿತು.  ಈ ಸಂದರ್ಭದಲ್ಲಿ ಸಂಪ್ಯ ಜಮಾಅತರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು. ಉಸ್ಮಾನ್ ಅವರನ್ನು ಜಾಗದ ವಿಚಾರದಲ್ಲಿ ಸಹೋದರರಾದ ಸತ್ತಾರ್ ಮತ್ತು ರಫೀಕ್ ಅವರು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. 

Read More
error: Content is protected !!