ಕರಾವಳಿ

ವಾಲಿಬಾಲ್ ಪಂದ್ಯಾಟ: ಬಾಲಕರ ವಿಭಾಗದಲ್ಲಿ ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್ ತಾಲೂಕು ಮಟ್ಟಕ್ಕೆ ಆಯ್ಕೆಪುತ್ತೂರು: 2023-24 ನೇ ಶೈಕ್ಷಣಿಕ ವರ್ಷದ ಸವಣೂರು ವಲಯ ಮಟ್ಟದ ಪ್ರಾಥಮಿಕ ವಿಭಾಗದ ವಾಲಿಬಾಲ್ ಪಂದ್ಯಾಟ ನರಿಮೊಗರು ಸರಸ್ವತಿ ವಿದ್ಯಾಮಂದಿರದಲ್ಲಿ ನಡೆಯಿತು.

ಸವಣೂರು ವಲಯ ಮಟ್ಟದ 13 ತಂಡಗಳು ಭಾಗವಹಿಸಿದ್ದವು. ಪ್ರತಿಭಾ ಶಾಲೆ ಪಟ್ಟೆ ಹಾಗೂ ಈಡನ್ ಗ್ಲೋಬಲ್ ಶಾಲೆ ಬೆಳಂದೂರು ನಡುವೆ ನಡೆದ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಈಡನ್ ಗ್ಲೋಬಲ್ ಶಾಲೆ ಬೆಳಂದೂರು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.

ಆಟಗಾರರಾದ ಶಿಫಾಝ್, ಅಹಮದ್ ತ್ವಹಾ, ಮು.ನಿಹಾದ್,ಮು.ಮುನವ್ವರ್, ಅಝೀಂ, ಶಾಯಿಝ್ ಅಹ್ಮದ್,ಮು. ಅಫ್ರಾಝ್, ಮು.ತೌಫೀಕ್,ಶಹದ್, ಅಫ್ರಾಝ್, ಅಯಾನ್,ಮು. ತ್ವಾಹಿರ್ ತಂಡವನ್ನು ಪ್ರತಿನಿಧಿಸಿದ್ದರು. ಶ್ರೀಮತಿ ಶ್ವೇತಾ ಕುಮಾರಿ.ಡಿ ಮತ್ತು ಇಮ್ತಿಯಾಝ್ ಸಿ.ಎಂ ತಂಡದ ತರಬೇತಿ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!