ಕೊಳ್ತಿಗೆ ಗ್ರಾ.ಪಂ ಬಿಜೆಪಿ ಬೆಂಬಲಿತೆ ಸದಸ್ಯೆ ಕಾಂಗ್ರೆಸ್ ಸೇರ್ಪಡೆ
ಪುತ್ತೂರು: ಕೊಳ್ತಿಗೆ ಗ್ರಾಪಂ ಬಿಜೆಪಿ ಬೆಂಬಲಿತೆ ಸದಸ್ಯೆ ಅಕ್ಕಮ್ಮರವರು ಪುತ್ತೂರು ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ಬ್ಲಾಕ್ ಪ್ರ. ಕಾರ್ಯದರ್ಶಿ ಅಮಲ ರಾಮಚಂದ್ರ, ಬ್ಲಾಕ್ ಕಾರ್ಯದರ್ಶಿ ಪವನ್ ದೊಡ್ಡಮನೆ, ಗ್ರಾಪಂ ಸದಸ್ಯರಾದ ಬಾಲಕೃಷ್ಣ ಕೆಮ್ಮಾರ, ಬ್ಲಾಕ್ ಕಿಸಾನ್ ಅಧ್ಯಕ್ಷ ಎಸ್ ಪಿ ಮುರಳೀದರ್ ಕೆಮ್ಮಾರ, ಗ್ರಾಪಂ ಸದಸ್ಯ ಪ್ರಮೋದ್ ಕೆ ಎಸ್, ಕೊಳ್ತಿಗೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀಧರ್ ಪೂಜಾರಿ ಚಾಲೆಪಡ್ಪು, ಮಾಜಿ ಗ್ರಾಪಂ ಸದಸ್ಯ ಭರತ್ ಕೆಮ್ಮಾರ, ವಿನೋದ್ ರೈ ಕೆಳಗಿನ ಮನೆ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಪುತ್ತೂರು ನಗರ ಯುವಕ ಕಾಂಗ್ರೆಸ್ ಉಪಾಧ್ಯಕ್ಷ ಅಖಿಲ್ ಸಾಮೆತ್ತಡ್ಕ,ಉದ್ಯಮಿಗಳಾದ ರಾಕೇಶ್ ರೈ ಕುದ್ಕಾಡಿ, ನಿಹಾಲ್ ಶೆಟ್ಟಿ, ರಿತೇಶ್ ಶೆಟ್ಟಿ ಕುತ್ಯಾಡಿ, ಸುದೇಶ್ ಶೆಟ್ಟಿ ಕೋಡಿಂಬಾಡಿ ಮತ್ತಿತರರು ಉಪಸ್ಥಿತರಿದ್ದರು.