ಕರಾವಳಿರಾಜಕೀಯ

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆ: ನೂತನ ಸಮಿತಿ ರಚನೆ, ಅಧ್ಯಕ್ಷರಾಗಿ ಹಾಜಿ ಇಬ್ರಾಹಿಂ ಸಾಗರ್ ಪುನರಾಯ್ಕೆ

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆ ಆ .18 ರಂದು ಪುತ್ತೂರು ಲಯನ್ಸ್ ಸಭಾಂಗಣದಲ್ಲಿ ನಡೆಯಿತು.

ಕಳೆದ 2ವರ್ಷಗಳ ಪಕ್ಷದ ಕಾರ್ಯ ಚಟುವಟಿಕೆ ಗಳ ಬಗ್ಗೆ ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವರದಿ ಮಂಡಿಸಿದರು. ಪಕ್ಷದ ಬಲವರ್ಧನೆ ಬಗ್ಗೆ ಅಸೆಂಬ್ಲಿ ವಾರು ನಾಯಕರೊಡನೆ SDPI ದ.ಕ ಜಿಲ್ಲಾ ಅದ್ಯಕ್ಷ ರು ಅಭಿಪ್ರಾಯಗಳನ್ನು ವಿನಿಮಯ ಮಾಡಿ ಪಕ್ಷ ಬಲವರ್ಧನೆ ಗೆ ಸಲಹೆ ಸೂಚನೆಗಳನ್ನು ನೀಡಿದರು. ನಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲುರವರು ನಾಯಕತ್ವದ ಬಗ್ಗೆ ತರಬೇತಿ ನೀಡಿದರು.


ಜಿಲ್ಲೆಯಾದ್ಯಂತರ ಪಕ್ಷದ ಮಧ್ಯಂತರ ಪ್ರತಿನಿಧಿ ಸಭೆಗಳಲ್ಲಿ ಪಕ್ಷದ ಪದಾದಿಕಾರಿಗಳಲ್ಲಿ ಕೆಲವೊಂದು ಬದಲಾವಣೆಗಳಯ ನಡೆದಂತೆ
ಪುತ್ತೂರಿನಲ್ಲಿಯೂ ಕ್ಷೇತ್ರ ಸಮಿತಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಯಿತು.
ಅದರಂತೆ ಅದ್ಯಕ್ಷರಾಗಿ ಇಬ್ರಾಹಿಂ ಸಾಗರ್, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಪುತ್ತೂರು ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಾಲ್ಮರ ರವರನ್ನು ಮುಂದುವರಿಸಲಾಯಿತು.


ಖಜಾಂಜಿಯಾಗಿ ವಿಶ್ವನಾಥ್ ಪುಣ್ಚತ್ತಾರು, ಜತೆಕಾರ್ಯದರ್ಶಿಯಾಗಿ ಅಬ್ದುರ್ರಹಿಮಾನ್ (ಅದ್ದು) ಕೊಡಿಪ್ಪಾಡಿ,ಮತ್ತು ಮುಸ್ತಫ DB ಯವರು ಆಯ್ಕೆ ಯಾದರು. ಪಕ್ಷದ ದ.ಕ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಮತ್ತು ದ‌ಕ ಜಿಲ್ಲಾ ಸದಸ್ಯರಾದ ಅಬೂಬಕ್ಕರ್ ಮದ್ದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೊನೆಯಲ್ಲಿ ಕ್ಷೇತ್ರ ಸಮಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕೆ.ಎ ಸಮಾರೋಪ ಭಾಷಣಗೈದರು. ಅಬ್ದುಲ್ ಹಮೀದ್ ಸಾಲ್ಮರ ಸ್ವಾಗತಿಸಿ ಕಾರ್ಯದರ್ಶಿ ಅಬ್ದುಲ್ ರಹಮಾನ್ ಕೊಡಿಪ್ಪಾಡಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!