ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಗೊಂದಲ, ಗ್ರಾ.ಪಂ ಎದುರು ಬಿಜೆಪಿ, ಪುತ್ತಿಲ ಪರಿವಾರದಿಂದ ಪ್ರತಿಭಟನೆ-ಅಧ್ಯಕ್ಷರಾಗಿ ಫೌಝಿಯ, ಉಪಾಧ್ಯಕ್ಷರಾಗಿ ರಾಮ ಮೇನಾಲ
ಪುತ್ತೂರು: ನೆ. ಮುಡ್ನೂರು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆ. 21ರಂದು ನಡೆದಿದ್ದು ಈ ವೇಳೆ ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಮತ ಪತ್ರದಲ್ಲಿ ಗೊಂದಲ ಉಂಟಾದ ಘಟನೆ ನಡೆದಿದೆ.
ಅಧ್ಯಕ್ಷರ ಆಯ್ಕೆಯ ಚುನಾವಣೆ ಸರಿಯಾಗಿ ನಡೆದಿದ್ದು ಘೋಷಣೆ ಮಾತ್ರ ಬಾಕಿ ಇತ್ತು.
ಉಪಾಧ್ಯಕ್ಷರ ಮತ ಎಣಿಕೆ ಸಂದರ್ಭ ಅಧ್ಯಕ್ಷ ಸ್ಥಾನದ 2 ಮತ ಪತ್ರ ಕಂಡು ಬಂದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿ ಆಯ್ಕೆ ಘೋಷಣೆ ಬಾಕಿಯಿದ್ದು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು ಬೇರೆ ಚುನಾವಣಾಧಿಕಾರಿ ಮೂಲಕ ಚುನಾವಣೆ ನಡೆಸುವಂತೆ ಆಗ್ರಹಿಸಿ ಮತದಾನ ಬಹಿಷ್ಕರಿಸಿ ಹೊರ ಹೋಗಿದ್ದು ಗ್ರಾಪಂ ಎದುರು ಪ್ರತಿಭಟನೆ ನಡೆಸಿದ್ದಾರೆ.
ಅಂತಿಮವಾಗಿ ಉಪಾಧ್ಯಕ್ಷತೆಗೆ ಮರು ಚುನಾವಣೆ ನಡೆದಾಗ ಬಿಜೆಪಿ ಹಾಗೂ ಪುತ್ತಿಲ ಬೆಂಬಲಿತ ಸದಸ್ಯರು ಗೈರಾಗಿದ್ದರು. ಮತದಾನದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮಾತ್ರ ಪಾಲ್ಗೊಂಡ ಕಾರಣ 12 ಮತಗಳನ್ನು ಪಡೆದ ರಾಮ ಮೇನಾಲ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಫೌಝಿಯಾ ಇಬ್ರಾಹಿಂ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಇಂದಿರಾ ಮಧ್ಯೆ ಸ್ಪರ್ಧೆ ನಡೆದು 13 ಮತ ಪಡೆದ ಫೌಝಿಯಾ ಇಬ್ರಾಹಿಂ ಅಧ್ಯಕ್ಷರಾಗಿ ಆಯ್ಕೆಯಾದರು. ಇಂದಿರಾ 8 ಮತ ಪಡೆದುಕೊಂಡರು.