ಕರಾವಳಿಕ್ರೈಂ

ಪುತ್ತೂರು: ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ
ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರ್ಪುಂಜ, ಕೊಯಿಲತ್ತಡ್ಕ ಪರಿಸರದಲ್ಲಿ ಕಳ್ಳರ ಹಾವಳಿ ಕಂಡುಬಂದಿದ್ದು ಈಗಾಗಲೇ ಕೆಲವು ಅಂಗಡಿಗಳಿಂದ ಸಣ್ಣಪುಟ್ಟ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ.

ಕೆಲವು ದಿನಗಳ ಹಿಂದೆ ಕುಟ್ಟಿನೋಪಿನಡ್ಕದಲ್ಲಿ ಮನೆಯೊಂದರ ಅಂಗಳದಲ್ಲಿ ಕಳ್ಳನೊಬ್ಬ ನಿಂತಿರುವುದರನ್ನು ಗಮನಿಸಿದ ಮನೆಯವರು ಬಾಗಿಲು ತೆಗೆದು ಹೊರಗೆ ಬರುವಷ್ಟರಲ್ಲಿ ಕಳ್ಳ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಕೆಲವು ದಿನಗಳಲ್ಲಿ ಈ ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ನಡೆಯುತ್ತಿದ್ದು ಚಿಲ್ಲರೆ ಕಳ್ಳರ ಹಾವಳಿ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!