ಕರಾವಳಿ

ಸೇಡಿಯಾಪು: ಬೈಕ್ ಅಪಘಾತದಿಂದ ಯುವಕ ಮೃತಪಟ್ಟ ಪ್ರಕರಣ: ವೈಯಕ್ತಿಕ ನೆಲೆಯಲ್ಲಿ ಯುವಕನ ಕುಟುಂಬಕ್ಕೆ ಶಾಸಕರಿಂದ ಧನಸಹಾಯ
ಪುತ್ತೂರು: ಕೆಲವು ದಿನಗಳ ಹಿಂದೆ ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ಬೈಕ್ ಸ್ಕಿಡ್ ಆಗಿ ಮೃತಪಟ್ಟಿದ್ದ ಸೇಡಿಯಾಪು ನಿವಾಸಿ ಚೈತ್ರೇಶ್ ರವರ ಕುಟುಂಬಕ್ಕೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಧನ ಸಹಾಯವನ್ನು ವಿತರಿಸಿದರು.


ಅಪಘಾತದಿಂದ ಮೃತಪಟ್ಟ ಯುವ ಚೈತ್ರೇಶ್ ರವರ ತಾಯಿ ಮಂಜುಳಾ ಅವರಿಗೆ ಶಾಸಕರು ರೂ. 25 ಸಾವಿರ ಮೊತ್ತವನ್ನು ವ್ಯಯುಕ್ತಿಕ ನೆಲೆಯಲ್ಲಿ ವಿತರಿಸಿದರು. ಚೈತ್ರೇಶ್ ಮನೆಗೆ ಭೇಟಿ ನೀಡಿದ್ದ ಶಾಸಕರು ಅವರ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ಕಂಡು ತನ್ನ ವೈಯಕ್ತಿಕ ನೆಲೆಯಲ್ಲಿ ಸಹಾಯ ಮಾಡುವುದಾಗಿ ಹೇಳಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಸಹಿತ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!