ಮೂರು ತಿಂಗಳ ಬಳಿಕ ಹೊಸ ಪಡಿತರ ಕಾರ್ಡು
ಪುತ್ತೂರು: ಮೂರು ತಿಂಗಳ ಬಳಿಕ ಹೊಸ ಪಡಿತರ ಚೀಟಿ ನೀಡಲಾಗುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ವಿಟ್ಲ ಕಾಂಗ್ರೆಸ್ ಸಭೆಯಲ್ಲಿ ಹೊಸ ಪಡಿತರ ಚೀಟಿ ಸಿಗುತ್ತಿಲ್ಲ ಎಂಬ ದೂರುಗಳಿವೆ ಎಂದು ಶಾಸಕರ ಗಮನಕ್ಕೆ ತಂದಾಗ ಹೊಸ ಪಡಿತರ ಚೀಟಿಯನ್ನು ಮೂರು ತಿಂಗಳ ಬಳಿಕ ನೀಡಲಾಗುತ್ತದೆ. ಸುಮಾರು 1 ಕೋಟಿ ಅರ್ಜಿಗಳು ಬಾಕಿ ಇದೆ. ಆರೋಗ್ಯ ಸಮಸ್ಯೆಗಳಿದ್ದವರು ಆಸ್ಪತ್ರೆಗೆ ಅಥವಾ ವಿಮೆ ಪಡೆದುಕೊಳ್ಳಲು ರೇಶನ್ ಕಾರ್ಡು ಬೇಕಾದಲ್ಲಿ ಅದನ್ನು ಸಂಬಂಧಿಸಿದವರ ಗಮನಕ್ಕೆ ತಂದರೆ ತುರ್ತು ಪರಿಗಣಿಸಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.