ಕೊಡಗು:ಕಾಫಿ ತೋಟದಲ್ಲಿ ಕಾಡಾನೆ ಸಾವು
ಕಾಡಾನೆಯೊಂದು ಸತ್ತು ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಗ್ರಾಮದ ಕಂಬಿಬಾಣೆಯ ಕಾಫಿ ತೋಟವೊಂದರಲ್ಲಿ ಕಂಡು ಬಂದಿದೆ.ಉದಯ ಎಂಬವರ ತೋಟದಲ್ಲಿ ಘಟನೆ ನಡೆದಿದ್ದು ಕಳೆದೆರಡು ದಿನಗಳ ಹಿಂದೆ ಆನೆ ಸಾವನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸಾವನ್ನಪ್ಪಿರುವ ಆನೆ ಅಂದಾಜು 16 ವರ್ಷದಾಗಿದ್ದು ವಿದ್ಯುತ್ ತಂತಿ ತಗುಲಿ ಈ ಘಟನೆ ಸಂಭವಿಸಿರಬಹುದು ಎಂದು ಸಂಶಯಿಸಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.