ಸಂಪ್ಯ: ಮೋರಿ ಕಾಮಗಾರಿಯಿಂದ ರಸ್ತೆಯಲ್ಲಿ ಅಪಾಯಕಾರಿ ಹೊಂಡ
ಶಾಸಕರಿಗೆ ದೂರು- ಹೊಂಡ ಮುಚ್ಚುವ ಕಾಮಗಾರಿ ಆರಂಭ
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಅಕ್ಷಯ ಕಾಲೇಜು ಬಳಿ ಹೊಸ ಮೋರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ನಿರ್ಮಾಣದ ವೇಳೆ ರಸ್ತೆ ಮಧ್ಯೆ ಅಪಾಯಕಾರಿ ಹೊಡ ನಿರ್ಮಾಣವಾಗಿದೆ. ಹೊಂಡ ಮುಚ್ಚುವಂತೆ ಹೆದ್ದಾರಿ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದ್ದರೂ ಹೊಂಡ ಮುಚ್ಚಿರಲಿಲ್ಲ. ಈ ನಡುವೆ ವಾಹನಗಳು ಅಪಘಾತ ಉಂಟಾಗುವ ಸಂಭವ ಇರುವ ಕಾರಣ ಸಂಪ್ಯ ಬೂತ್ ಅಧ್ಯಕ್ಷರಾದ ಶಾಫಿ ಎಂಬವರು ಶಾಸಕರಿಗೆ ದೂರು ಸಲ್ಲಿಸಿದ್ದರು.

ಶಾಸಕರ ಸೂಚನೆಯಂತೆ ರಸ್ತೆ ಮಧ್ಯೆ ಇದ್ದ ಅಪಾಯಕಾರಿ ಹೊಂಡವನ್ನು ಮುಚ್ಚಲು ಹೆದ್ದಾರಿ ಇಲಾಖೆ ಒಪ್ಪಿಕೊಂಡಿದ್ದು ಗುರುವಾರ ಬೆಳಿಗ್ಗೆ ಕೆಲಸವನ್ನು ಆರಂಭಿಸಿದ್ದಾರೆ. ಮೋರಿ ಕಾಮಗಾರಿಯನ್ನು ತುರ್ತಾಗಿ ಮುಗಿಸುವಂತೆಯೂ ಶಾಸಕ ಅಶೋಕ್ ರೈ ಸೂಚನೆಯನ್ನು ನೀಡಿದ್ದಾರೆ.