ಅಂತಾರಾಷ್ಟ್ರೀಯಕರಾವಳಿ

ಕುಂಬ್ರ ಮರ್ಕಝುಲ್ ಹುದಾ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಸಾದಿಕ್ ಸುಳ್ಯ, ಪ್ರ.ಕಾರ್ಯದರ್ಶಿ ಫಾಝಿಲ್ ಕಂಕನಾಡಿ



ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಒಮಾನ್ ರಾಷ್ಟ್ರೀಯ ಸಮಿತಿಯ ಮಹಾಸಭೆ ಮತ್ತು ಶೈಖ್ ರಿಫಾಯಿ ಸಂಸ್ಮರಣೆ ಕಾರ್ಯಕ್ರಮ ರುವಿ ಆತ್ರಾಡಿ ಹೌಸ್‌ನಲ್ಲಿ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆಯಿತು. ನಂತರ ಒಮಾನ್ ರಾಷ್ಟ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಹಾಜಿ ಮುಹಮ್ಮದ್ ಇಬ್ರಾಹಿಂ ಆತ್ರಾಡಿ, ಅಧ್ಯಕ್ಷರಾಗಿ ಮುಹಮ್ಮದ್ ಸ್ವಾದಿಖ್ ಸುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಫಾಝಿಲ್ ಕಂಕನಾಡಿ, ಕೋಶಾಧಿಕಾರಿಯಾಗಿ ಉಮರ್ ಸಖಾಫಿ ಅಲ್ ಸಫಾ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸಮೀರ್ ಉಸ್ತಾದ್ ಹೂಡೆ ಹಾಗೂ ಹಂಝ ಹಾಜಿ ಕನ್ನಂಗಾರ್, ಕಾರ್ಯದರ್ಶಿಗಳಾಗಿ ಅಬ್ದುಲ್ಲತೀಫ್ ಮಂಜೇಶ್ವರ, ಅಬ್ಬಾಸ್ ಮರಕಡ, ಕೋ ಆರ್ಡಿನೇಟರ್ ಆಗಿ ಉಬೈದುಲ್ಲಾಹ್ ಸಖಾಫಿ ಮಿತ್ತೂರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಝೀಝ್ ಬಾಳೆಹೊನ್ನೂರು, ಹನೀಫ್ ಮಣ್ಣಾಪು, ಸಿದ್ದೀಖ್ ಕಬಕ, ಲತೀಫ್ ತೋಡಾರ್,

ರಿಯಾಝ್ ಮಂಜನಾಡಿ, ಮುಝಮ್ಮಿಲ್ ಅಳಕೆಮಜಲು, ಸಿದ್ದೀಖ್ ಕೋಟ, ಶಾಹುಲ್ ಹಮೀದ್ ಸುರಲ್ಪಾಡಿ, ಕರೀಂ ಕಂಡಿಗೆ, ಶಾಕಿರ್ ಸುಳ್ಯ, ರಜಬ್ ಕಾಪು ಆಯ್ಕೆಯಾಗಿದ್ದಾರೆ.

ಸಲಹೆಗಾರರಾಗಿ ಸಯ್ಯಿದ್ ಝೈನುಲ್ ಆಬಿದ್ ಅಲ್ ಐದರೂಸ್ ಎಮ್ಮೆಮಾಡು, ಇಖ್ಬಾಲ್ ಬರಕ, ಅಯ್ಯೂಬ್ ಕೋಡಿ, ಮೋನಬ್ಬ ಅಬ್ದುಲ್ ರಹ್ಮಾನ್, ಫಾರೂಖ್ ಸೊಹಾರ್, ಆರಿಫ್ ಕೋಡಿ, ಸಯ್ಯಿದ್ ಮೊಹಿದ್ದಿನ್ ಸಾಹೆಬ್ ಸಾಸ್ತಾನ, ಅಬ್ಬಾಸ್ ಪಡುಬಿದ್ರೆ, ಉಸ್ತಾದ್ ರಫೀಖ್ ಹೂಡೆ ಅವರನ್ನು ಆಯ್ಕೆ ಮಾಡಲಾಯಿತು.

ನಿಕಟಪೂರ್ವ ಅಧ್ಯಕ್ಷ ಹಾಜಿ ಇಬ್ರಾಹಿಂ ಆತ್ರಾಡಿ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಯ್ಯೂಬ್ ಕೋಡಿ ಉಧ್ಘಾಟಿಸಿದರು. ಮರ್ಕಝುಲ್ ಹುದಾ ಒಮಾನ್ ರಾಷ್ಟ್ರೀಯ ಸಮಿತಿಯ ಸಂಯೋಜಕ ಉಬೈದುಲ್ಲಾಹ್ ಸಖಾಫಿ ಮಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಕೆಎಸ್ಸಿ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಮೋನಬ್ಬ ಅಬ್ದುಲ್ ರಹ್ಮಾನ್, ಮಸ್‌ನವೀ ಗ್ಲೋಬಲ್ ಅಕಾಡೆಮಿ ಉಪಾಧ್ಯಕ್ಷ ಉಮರ್ ಸಖಾಫಿ ಎಡಪ್ಪಾಲ್ ಶುಭ ಹಾರೈಸಿದರು. ಸಾದಿಕ್ ಸುಳ್ಯ ಸ್ವಾಗತಿರು. ಫಾಝಿಲ್ ಕಂಕನಾಡಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!