ವಿಟ್ಲ: ಮರದಿಂದ ಬಿದ್ದು ವ್ಯಕ್ತಿ ಮೃತ್ಯು
ವಿಟ್ಲ: ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಟ್ಲ ಸಮೀಪದ ಸಾರಡ್ಕದಲ್ಲಿ ನಡೆದಿದೆ.
ಬೆಳ್ತಗಂಡಿ ಮಚ್ಚಿನ ಭುಜಂಗಬೆಟ್ಟು ನಿವಾಸಿ ಕೇಶವ ನಾಯ್ಕ (56) ಮೃತರಾಗಿದ್ದಾರೆ.

ಕೇಪು ಗ್ರಾಮದ ಸಾರಡ್ಕದಲ್ಲಿ ಕೃಷಿಕರೊಬ್ಬರ ಮನೆಯಲ್ಲಿ ಉಳಿದುಕೊಂಡು ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಕೇಶವ ಅವರು ಹಲಸಿನ ಮರ ಏರಿ ಕಾಳು ಮೆಣಸು ಕೀಳುವ ಸಮಯ ಆಕಸ್ಮಿಕವಾಗಿ ಕೈ, ಕಾಲು ಜಾರಿ ಕೆಳಗೆ ನೆಲಕ್ಕೆ ಬಿದ್ದಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಿದಾಗ ವೈದ್ಯರು ಮೃತರಾಗಿರುವ ಬಗ್ಗೆ ದೃಢೀಕರಿಸಿದ್ದಾರೆ. ಈ ಬಗ್ಗೆ ಸಹೋದರ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.