ಸುಳ್ಯ: ಕಾಂಗ್ರೆಸ್’ನಿಂದ ಸಿಗದ ಟಿಕೆಟ್ ; ಎ.15ರಂದು ಹೆಚ್.ಎಂ ನಂದಕುಮಾರ್ ನಾಮಪತ್ರ ಸಲ್ಲಿಕೆ
ಸುಳ್ಯ ಬಾರಿ ಕುತೂಹಲ ಮೂಡಿಸಿರುವ ವಿಧಾನಸಭಾ ಚುನಾವಣಾ ರಣರಂಗ ಬೇರೆ ಬೇರೆ ವಿದ್ಯಮಾನಗಳಿಗೆ ಕಾರಣವಾಗುತ್ತಿದೆ. ಇದೀಗ ನಾಮಪತ್ರ ಸಲ್ಲಿಕೆಯ ವಿಚಾರದಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷ ತಳಮಳ ಗೊಂಡಂತಿದೆ.

ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ವಕ್ತಾರ ಎಚ್.ಎಂ ನಂದಕುಮಾರ್ ಕೈ ಟಿಕೆಟ್ ತಪ್ಪಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ಸಿಗದಿದ್ದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವುದು ಖಚಿತ ಎಂದು ತಿಳಿದುಬಂದಿದೆ. ಎ.15 ರಂದು ಬೆಳಿಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸಲ್ಲಿಸುವ ಕುರಿತು ದಿನಾಂಕ ಪ್ರಕಟಿಸಲಾಗಿದ್ದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಭಾಗವಹಿಸುವ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ನಂದಕುಮಾರ್ ಅಭಿಮಾನಿ ಕಾರ್ಯಕರ್ತರ ಬಳಗದ ಪ್ರಕಟಣೆ ತಿಳಿಸಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದು ಅವರ ಅಭಿಮಾನಿ ಬಳಗದ ಮುಖಂಡರು ತಿಳಿಸಿದ್ದಾರೆ.
ನಿಂತಿಕಲ್ಲಿನಲ್ಲಿ ನಡೆದ ನಂದಕುಮಾರ್ ಅಭಿಮಾನಿಗಳಾದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ನಂದಕುಮಾರ್ ಸ್ಪರ್ಧೆ ನಡೆಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಬಿ.ಫಾರಂ ನೀಡದಿದ್ದರೆ ಪಕ್ಷೇತರರಾಗಿ ಕಣಕ್ಕೆ ಇಳಿಯಲು ನಿರ್ಧರಿಸಲಾಗಿದೆ. ಕಾರ್ಯಕರ್ತರ, ಅಭಿಮಾನಿಗಳ ಹಾಗೂ ಸ್ನೇಹಿತರ ಒತ್ತಾಸೆಯ ಮೇರೆಗೆ ಚುನಾವಣಾ ಕಣಕ್ಕೆ ಇಳಿಯುವುದಾಗಿ ನಂದಕುಮಾರ್ ತಿಳಿಸಿದ್ದಾರೆ.