ಸುಬ್ರಹ್ಮಣ್ಯ: ಹಿಂದೂ ಯುವತಿಯೊಂದಿಗೆ ತಿರುಗಾಡುತ್ತಿದ್ದ ಆರೋಪ- ಮುಸ್ಲಿಂ ಯುವಕನಿಗೆ ಗುಂಪು ಹಲ್ಲೆ, ಯುವಕ ಸುಳ್ಯ ಆಸ್ಪತ್ರೆಗೆ ದಾಖಲು,
ಸುಬ್ರಹ್ಮಣ್ಯ ಪರಿಸರದಲ್ಲಿ ಒಂದು ಕೋಮಿನ ವಿದ್ಯಾರ್ಥಿಯೋರ್ವ ಗುಂಪು ಹಲ್ಲೆಗೊಳಗಾಗಿ ಸುಳ್ಯ ಆಸ್ಪತ್ರೆ ದಾಖಲಾಗಿರುವ ಘಟನೆ ಸಂಭವಿಸಿದೆ.
ಹಲ್ಲೆಗೊಳಗಾದ ಯುವಕ ಕಲ್ಲುಗುಂಡಿ ನಿವಾಸಿ ಆಟೋ ಚಾಲಕ ಅನೀಫ್ ಎಂಬವರ ಪುತ್ರ ಅಫೀದ್ ಎಂದು ತಿಳಿದು ಬಂದಿದ್ದು, ಗಂಭೀರ ಗಾಯಗೊಂಡ ಈತ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.
ಹಲ್ಲೆಗೆ ಕಾರಣ ಈತ ಹಿಂದೂ ಯುವತಿಯೊಂದಿಗೆ ಸುಬ್ರಹ್ಮಣ್ಯದಲ್ಲಿ ಸುತ್ತಾಡುತ್ತಿದ್ದ ಆರೋಪ ಕೇಳಿಬಂದಿದೆ. ಯುವಕನನ್ನು ಅರೆ ನಗ್ನಗೊಳಿಸಿ ಹಲ್ಲೆ ನಡೆಸಲಾಗಿದೆ.
ಘಟನೆಗೆ ಸಂಬಂಧಿಸಿ ಯುವಕನ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.