ನಿಶಾನ್ ಕುಮಾರ್ ಗೆ ಜೆಇಇ ಪರೀಕ್ಷೆಯಲ್ಲಿ 998 ರ್ಯಾಂಕ್
ಪುತ್ತೂರು: JEE ಪರೀಕ್ಷೆಯಲ್ಲಿ ಸರ್ವೆ ಗ್ರಾಮದ ಸೊರಕೆಯ ನಿಶಾನ್ ಕುಮಾರ್ ಅವರು ALL INDIA RANK 998 ಪಡೆದುಕೊಂಡಿದ್ದಾರೆ.

ಮಂಗಳೂರು ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ವಿದ್ಯಾರ್ಥಿಯಾಗಿರುವ ನಿಶಾನ್ ಕುಮಾರ್ ಸೊರಕೆ ಅವರು 2023-24ನೇ ಸಾಲಿನ
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 96.83(581) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇವರು ವಿಜಯ ಕುಮಾರ್ ಸೊರಕೆ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರ.