ರಾಷ್ಟ್ರೀಯ

ಅಪಘಾತದ ವೇಳೆ ಕ್ರಿಕೆಟಿಗ ರಿಷಬ್ ಪಂತ್’ರನ್ನು ರಕ್ಷಿಸಿದ ಚಾಲಕ, ನಿರ್ವಾಹಕಗೆ ಸನ್ಮಾನ

ಭೀಕರ ರಸ್ತೆ ಅ‍ಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದ್ದ ಕಾರಿನಿಂದ ಕ್ರಿಕೆಟಿಗ ರಿಷಭ್‌ ಪಂತ್‌ ಅವರಿಗೆ ಹೊರಬರಲು ಸಹಾಯ ಮಾಡಿದ ಬಸ್‌ ಚಾಲಕ ಸುಶೀಲ್‌ ಕುಮಾರ್‌ ಹಾಗೂ ನಿರ್ವಾಹಕ ಪರಮ್‌ಜೀತ್‌ ಅವರಿಗೆ ಹರಿಯಾಣ ಸಾರಿಗೆ ಸಂಸ್ಥೆ ‘ಹರಿಯಾಣ ರೋಡ್‌ವೇಸ್‘ ಸನ್ಮಾನ ಮಾಡಿ ಗೌರವಿಸಿದೆ.

ದೆಹಲಿ–ಡೆಹ್ರಾಡೂನ್‌ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ರಿಷಭ್‌ ಪಂತ್‌ ಅವರ ಕಾರು ಅಪಘಾತಕ್ಕೀಡಾಗಿದ್ದು ಪವಾಡಸದೃಶ ರೀತಿಯಲ್ಲಿ ಪಂತ್‌ ಪ್ರಾಣಾ‍‍ಪಾಯದಿಂದ ಪಾರಾಗಿದ್ದರು.

ಪಂತ್‌ ಚಾಲನೆ ಮಾಡುತ್ತಿದ್ದ ಮರ್ಸಿಡಿಸ್‌ ಬೆಂಜ್‌ ಕಾರು ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಬೆಂಕಿ ಆವರಿಸುವ ಮುನ್ನವೇ ಕಾರಿನಿಂದ ಹೊರಬರುವಂತೆ ಮಾಡಲು ಇವರು ಸಹಾಯ ಮಾಡಿದ್ದರು.

ರಾಜ್ಯ ಸರ್ಕಾರ ಕೂಡ ಇವರಿಬ್ಬರಿಗೆ ಸನ್ಮಾನ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!